ಕಾಗೆ, ಗುಬ್ಬಿ ಪಕ್ಷಿಗಳೆಲ್ಲಾ ಕೂತಿದ್ದಕ್ಕೇ ನಂಬಿಕೊಂಡು ಇರೋಕೆ ಆಗುತ್ತಾ? ಮರದ ಕೆಳಕ್ಕೆ ಕೂತಿದ್ದೇ ಅದಕ್ಕೆ ಪಕ್ಷಿಯೊಂದು ಹಿಕ್ಕೆ ಹಾಕಿದೆ, ಎಂದು ಸಿಎಂ ಪ್ರತಿಕ್ರಿಯಿಸಿದ್ದಾರೆ.
ಶಿವಮೊಗ್ಗ (ಜ.20): ನಿನ್ನೆ ಕಾಸರಗೋಡಿನ ಮಂಜೇಶ್ವರದಲ್ಲಿ ಕಾಗೆ ಹಿಕ್ಕೆ ಬಿದ್ದಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಕಾಗೆ, ಗುಬ್ಬಿ ಪಕ್ಷಿಗಳೆಲ್ಲಾ ಕೂತಿದ್ದಕ್ಕೇ ನಂಬಿಕೊಂಡು ಇರೋಕೆ ಆಗುತ್ತಾ? ಮರದ ಕೆಳಕ್ಕೆ ಕೂತಿದ್ದೇ ಅದಕ್ಕೆ ಪಕ್ಷಿಯೊಂದು ಹಿಕ್ಕೆ ಹಾಕಿದೆ, ಎಂದು ಸಿಎಂ ಪ್ರತಿಕ್ರಿಯಿಸಿದ್ದಾರೆ.
ಮುಂದುವರಿದು, ತಾವು ಇಂತಹ ಶಕುನಗಳನ್ನ ನಂಬುವುದಿಲ್ಲವೆಂದೂ ಅವರು ಹೇಳಿದ್ದಾರೆ.
ಲೋಕಾಯುಕ್ತ ನೇಮಕಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿಎಂ, ನ್ಯಾ. ವಿಶ್ವನಾಥ್ ಶೆಟ್ಟಿಯವರು ನಿವೇಶನ ಪಡೆದಿರುವ ಬಗ್ಗೆ ರಾಜ್ಯಪಾಲರು ಸ್ಪಷ್ಟಿಕರಣ ಕೇಳಿದ್ದಾರೆ. ಮಾಜಿ ಲೋಕಾಯುಕ್ತ ನ್ಯಾ. ವೆಂಕಟಾಚಲ ಸೇರಿದಂತೆ ಎಲ್ಲರೂ ನಿವೇಶನ ಪಡೆದವರೇ, ಅದನ್ನು ದೊಡ್ಡದು ಮಾಡೋಕೆ ಅಗೋಲ್ಲ. ಹೀಗಾಗಿ ಲೋಕಾಯುಕ್ತ ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಕೇಳಿದ ಸ್ಪಷ್ಟನೆ ನೀಡಿ ಅವರ ಹೆಸರನ್ನೇ ಪುನಃ ಶಿಫಾರಸ್ಸು ಮಾಡುತ್ತೆವೆಂದು ಸಿಎಂ ಹೇಳಿದ್ದಾರೆ.