Asianet Suvarna News Asianet Suvarna News

(ವಿಡಿಯೋ) ಇದು ಪಾಪಾಸ್ ಕಳ್ಳಿಯ ಗಿನ್ನಿಸ್ ರೇಕಾರ್ಡ್ ಸ್ಟೋರಿ

ಇದನ್ನು ಅಪಶಕುನ, ಕಳೆ ಎಂದು ಜರಿಯುವವರೇ ಜಾಸ್ತಿ.

This is Cactus Guinness record story

ಪಾಪಾಸ್​ಕಳ್ಳಿ ಎಂದ ಕೂಡಲೇ ಮೂಗು ಮುರಿಯುವವರೇ ಹೆಚ್ಚು. ಆದರೆ ಧಾರವಾಡದಲ್ಲಿ ಪಾಪಾಸ್​ಕಳ್ಳಿಯೊಂದು ಬೆಳೆಸಿದವರಿಗೆ ಅಭಿಮಾನದ ಸಂಕೇತವಾಗಿದೆ. ಈ ಅಭಿಮಾನಕ್ಕೆ ಕಾರಣ ಅದು ಗಿನ್ನೆಸ್​ ರೆಕಾರ್ಡು ಮಾಡಿದ್ದು.

ಪಾಪಾಸ್​ಕಳ್ಳಿ ಅಂದ್ರೆ ಇಂಗ್ಲೀಷ್​ನಲ್ಲಿ ಕ್ಯಾಕ್ಟಸ್​. ಇದನ್ನು ಅಪಶಕುನ, ಕಳೆ ಎಂದು ಜರಿಯುವವರೇ ಜಾಸ್ತಿ. ಅಂಥಾದ್ರಲ್ಲಿ ಧಾರವಾಡದ ಎಸ್​ಡಿಎಮ್​ ಕಾಲೇಜಿನಲ್ಲಿನ ಕೆಲ ಕ್ಯಾಕ್ಟಸ್​ ಪ್ರೇಮಿಗಳು ಯಾರೂ ಮಾಡದ ಸಾಧನೆ ಮಾಡಿದ್ದಾರೆ. ಹೌದು ಇಲ್ಲಿನ ಸುರೇಂದ್ರ ಮತ್ತು ಆತನ ತಂಡ ಅತೀ ಎತ್ತರವಾಗಿ ಕ್ಯಾಕ್ಟಸ್​ ಬೆಳೆಸುವ ಮೂಲಕ ಗಿನ್ನೆಸ್​ ದಾಖಲೆ ಪುಸ್ತಕ ಸೇರುವಂತೆ ಮಾಡಿದ್ದಾರೆ. ಇದರ ಹಿಂದಿನ ಶ್ರಮವೇನು ಸಣ್ಣದಲ್ಲ. 2002 ರಿಂದ ಪ್ಲಾಂಟ್​ ಮಾಡಲಾಗಿದ್ದ ಈ ಪಾಪಾಸ್​ಕಳ್ಳಿಗಳನ್ನ ಬರೋಬ್ಬರಿ 14 ವರ್ಷಗಳಿಂದ ಜತನದಿಂದ ಕಾಯ್ದುಕೊಂಡು ಬರಲಾಗಿದೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.

 

105 ಅಡಿ ಬೆಳೆದಿರುವ ಈ ಪಾಪಾಸ್​ಕಳ್ಳಿ ವಿಶ್ವದಾಖಲೆಗೆ ಸೇರ್ಪಡೆಯಾಗುತ್ತಿರುವುದು ಎರಡನೇ ಬಾರಿ. ತನ್ನದೇ ದಾಖಲೆಯನ್ನು ತಾನೇ ಮುರಿದಿರುವುದು ಇದರ ವಿಶೇಷ. ಕ್ಯಾಕ್ಟಸ್​ ಎತ್ತರಕ್ಕೆ ಬೆಳೆದಂತೆ ಬುಡ ಸಡಿಲಾಗುತ್ತದೆ. ಹಾಗಾಗಿ ದೊಡ್ಡ ಟವರ್​ವೊಂದನ್ನ ಕ್ಯಾಕ್ಟಸ್​ ಮುರಿಯಬಾರದು ಎನ್ನುವುದಕ್ಕಾಗಿಯೆ ನಿರ್ಮಿಸಲಾಗಿದೆ. 2009 ರಲ್ಲಿ 78 ಫೂಟ್​ ಬೆಳೆದಿದ್ದ ಈ ಪಾಪಾಸ್​ಕಳ್ಳಿ ಮೊದಲ ಬಾರಿ ಗಿನ್ನೆಸ್​ ಪುಸ್ತಕದಲ್ಲಿ ಜಾಗ ಗಿಟ್ಟಿಸಿತ್ತು. ಮತ್ತೆ ಈಗ 105 ಅಡಿ ಬೆಳೆಯುವ ಮೂಲಕ ವಿಶ್ವದಾಖಲೆಗೆ ಪಾತ್ರವಾಗಿ ಬೆಳೆಸಿದವರಿಗೂ ಹೆಸರು ತಂದಿದೆ.

ಬರೋಬಬರಿ 14 ವರ್ಷಗಳ ಕಾಲ ಕ್ಯಾಕ್ಟಸ್​ವೊಂದನ್ನು ಬೆಳೆಸಿ, ಜತನ ಮಾಡಿ ದಾಖಲೆ ಮಾಡುವಂತೆ ಮಾಡಿರುವ ಧಾರವಾಡದ ಎಸ್​ಡಿಎಮ್​ ಕಾಲೇಜು ಸಿಬ್ಬಂದಿಗಳ ಪ್ರಯತ್ನ ನಿಜಕ್ಕೂ ವಿಭಿನ್ನ ಅಂತಾನೇ ಹೇಳ್ಬೇಕು.

ವರದಿ: ಸಿದ್ದು ಸತ್ಯಣ್ಣನವರ್, ಸುವರ್ಣ ನ್ಯೂಸ್

 

 

Follow Us:
Download App:
  • android
  • ios