Asianet Suvarna News Asianet Suvarna News

‘ಸಬ್ ಕಾ ಮಾಲೀಕ್ ಏಕ್ ಹೈ’ ಗದಗದಲ್ಲೊಂದು ಹಿಂದೂ-ಮುಸ್ಲಿಮರ ಗಣೇಶ

ದಿನ ನಿತ್ಯ ಜಾತಿ ಹೆಸರಿನಲ್ಲಿ ಅನೇಕ ಗದ್ದಲ ಗಲಾಟೆ ನಡೆಯುತ್ತಲೇ ಇರುತ್ತವೇ ಆದ್ರೆ ಇದಕ್ಕೆ ವಿರುದ್ಧವಾಗಿ ಸಬ್ ಕಾ ಮಾಲೀಕ್ ಎಕ್ ಹೈ,  ಹಿಂದು ಮುಸ್ಲಿಂ ಅಲಗ್ ನಹೀ ಹೈ ಎಂದು ಗದಗ ಜಿಲ್ಲೆ ಕಳಸಾಪೂರ ಗ್ರಾಮದ ಜನರು ಭಾವೈಕ್ಯತೆಯಿಂದ ಗಣಪತಿಯ ಹಬ್ಬವನ್ನ ಸಂಭ್ರಮದಿಂದ ಆಚರಿಸಿದ್ದಾರೆ.

This Gadag Village Observes Inter faith Ganesha Festival

ಗದಗ: ದಿನ ನಿತ್ಯ ಜಾತಿ ಹೆಸರಿನಲ್ಲಿ ಅನೇಕ ಗದ್ದಲ ಗಲಾಟೆ ನಡೆಯುತ್ತಲೇ ಇರುತ್ತವೇ ಆದ್ರೆ ಇದಕ್ಕೆ ವಿರುದ್ಧವಾಗಿ ಸಬ್ ಕಾ ಮಾಲೀಕ್ ಎಕ್ ಹೈ,  ಹಿಂದು ಮುಸ್ಲಿಂ ಅಲಗ್ ನಹೀ ಹೈ ಎಂದು ಗದಗ ಜಿಲ್ಲೆ ಕಳಸಾಪೂರ ಗ್ರಾಮದ ಜನರು ಭಾವೈಕ್ಯತೆಯಿಂದ ಗಣಪತಿಯ ಹಬ್ಬವನ್ನ ಸಂಭ್ರಮದಿಂದ ಆಚರಿಸಿದ್ದಾರೆ.

ಹಿಂದೂಗಳ ದೇವರು, ಮುಸ್ಲಿಮರಿಂದ ಪೂಜೆ-ಪುರಸ್ಕಾರ, ಎರಡು ಧರ್ಮಗಳ ಜನರು ಒಟ್ಟಿಗೆ ಬೆರೆತು ಸಂಭ್ರಮ,  ಇದು ಗದಗ ಜಿಲ್ಲೆ ಕಳಸಾಪೂರ ಗ್ರಾಮದಲ್ಲಿನ ಭಾವೈಕ್ಯತೆ ಗಣೇಶೋತ್ಸವದ ದೃಶ್ಯ,

ಇಂಥದ್ದೊಂದು ಭಾವೈಕ್ಯತೆ ಗಣೇಶೋತ್ಸವ ಕಳೆದ 8 ವರ್ಷಗಳಿಂದ ಇದೇ ರೀತಿ ನಡೆಯುತ್ತಲೇ ಬಂದಿದೆ. ಹಿಂದು ಮುಸ್ಲಿಮರು ಧರ್ಮಬೇಧವಿಲ್ಲದೇ ಒಟ್ಟಿಗೆ ಬೆರೆತು ಗಣೇಶ ಹಬ್ಬ ಆಚರಿಸುತ್ತಾರೆ.

ಇನ್ನೂ ಗ್ರಾಮದಲ್ಲಿನ  ಅಂಜುಮಾನ್  ಕಮಿಟಿ ಹಾಗೂ ಈಶ್ವರ ದೇವಾಲಯದ ಕಮಿಟಿ ಇಬ್ಬರು ಜೊತೆಯಾಗೇ ಈ ಗಣೇಶೋತ್ಸವ ಆಚರಿಸುವುದು ಇನ್ನೊಂದು ವಿಶೇಷ.

ಇಲ್ಲಿ ಗಣೇಶನ ಪೂಜೆಯಲ್ಲೂ ತಾರತಮ್ಯವಿಲ್ಲ. ಜಾತಿ-ಬೇಧ ಮರೆತು ಒಟ್ಟಿಗೆ ವಿನಾಯಕನ ಪೂಜಿಸಿ  ಗ್ರಾಮಧ ಅಭಿವೃದ್ಧಿಗೆ  ಪ್ರಾರ್ಥಿಸುತ್ತಿದ್ದಾರೆ.

ಧರ್ಮ-ಜಾತಿ ಎಂದು ಪರಸ್ಪರ ಕಿತ್ತಾಡಿಕೊಳ್ಳುವ ಜನರು ಕಳಸಾಪುರ ಗ್ರಾಮವನ್ನು ನೋಡಿ ಕಲಿಯಬೇಕಿದೆ. ಆ ಸಿದ್ದಿವಿನಾಯಕ ಈ ಗ್ರಾಮದ ಭಾವೈಕ್ಯತೆಯನ್ನು ಹೀಗೆ ಹಾಳಾಗಂತೆ ನೋಡಿಕೊಳ್ಳಲಿ  ಅನ್ನೋದು ನಮ್ಮ ಆಶಯ.

ವರದಿ: ಗದಗನಿಂದ ಅಮೃತ ಅಜ್ಜಿ

Follow Us:
Download App:
  • android
  • ios