ನಿಮ್ಮ ಮಕ್ಕಳಿಗೆ ಹೈ ಪೈ ಶಿಕ್ಷಣ ನೀಡುತ್ತೇವೆ. ಮಕ್ಕಳಿಗೆ ಯಾವುದೇ ಒತ್ತಡ ನೀಡದೆ ಪ್ರಾಯೋಗಿಕ ಶಿಕ್ಷಣ ನೀಡುವ ಮೂಲಕ ಮಕ್ಕಳ ಜ್ಞಾನ ಹೆಚ್ಚಿಸುತ್ತೇವೆ ಅಂತಾ  ಹೇಳಿ  ವರ್ಷಕ್ಕೆ  1.5ಲಕ್ಷ  ಹಣ ಪಡೆದು, ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ ಆಡಿದ್ದಾರೆ.

ಬೆಂಗಳೂರು(ಜು.29): ನಿಮ್ಮ ಮಕ್ಕಳಿಗೆ ಹೈ ಪೈ ಶಿಕ್ಷಣ ನೀಡುತ್ತೇವೆ. ಮಕ್ಕಳಿಗೆ ಯಾವುದೇ ಒತ್ತಡ ನೀಡದೆ ಪ್ರಾಯೋಗಿಕ ಶಿಕ್ಷಣ ನೀಡುವ ಮೂಲಕ ಮಕ್ಕಳ ಜ್ಞಾನ ಹೆಚ್ಚಿಸುತ್ತೇವೆ ಅಂತಾ ಹೇಳಿ ವರ್ಷಕ್ಕೆ 1.5ಲಕ್ಷ ಹಣ ಪಡೆದು, ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ ಆಡಿದ್ದಾರೆ.

ವಿದೇಶದಲ್ಲಿ ಸಾಕಷ್ಟು ಪ್ರಸಿದ್ದಿ ಪಡೆದ ಮಾಂಟೇನ್ಸರಿ ಹಾಗೂ ಅಲ್ಟ್ರನೇಟಿವ್ ಏಜುಕೇಷನ್ ಪದ್ದತಿಯನ್ನು ಇಲ್ಲಿನ ಮಕ್ಕಳಿಗೆ ಕಲಿಸುವುದಾಗಿ 2012ರಲ್ಲಿ ಬೆಂಗಳೂರಿನ ಕೋರಮಂಗಲದಲ್ಲಿ ಲಾ ವಿಸ್ಡಮ್ ಶಿಕ್ಷಣ ಸಂಸ್ಥೆಯನ್ನು ಜೆಸ್ ಪಾಲ್ ಎಂಬುವವರು ಆರಂಭಿಸಿದ್ದಾರೆ. ಪ್ರತಿ ವಿದ್ಯಾರ್ಥಿಗೆ ವರ್ಷಕ್ಕೆ ತಲಾ ಒಂದುಕಾಲು ಲಕ್ಷ ಫೀಸ್ ಪಡೆದಿದ್ದಾರೆ. ವಿದ್ಯಾರ್ಥಿಗಳಿಗೆ ಯಾವುದೇ ಒತ್ತಡ ನೀಡದೆ ಪ್ರಾಯೋಗಿಕ ಶಿಕ್ಷಣ ನೀಡುವ ಮೂಲಕ ಮಕ್ಕಳ ಜ್ಞಾನ ಹೆಚ್ಚಿಸಲು ಮುಂದಾಗುತ್ತೇವೆ ಎನ್ನುವ ಭರವಸೆಯನ್ನೂ ಶಿಕ್ಷಣ ಸಂಸ್ಥೆ ನೀಡಿತ್ತಂತೆ. ಆದರೆ ಈಗ ಆಗುತ್ತಿರುವುದೇ ಬೇರೆ. ಇದು ಬರೀ ಹಣ ಮಾಡುವ ಸಂಸ್ಥೆ ಎನ್ನುವುದು ಪೋಷಕರ ಆರೋಪ.

ಇನ್ನೂ ಪ್ರತಿ ವರ್ಷ 40 ರಿಂದ 100 ಮಕ್ಕಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ, ಶಿಕ್ಷಣದಲ್ಲಿ ಮಾತ್ರ ಗುಣಮಟ್ಟವಿಲ್ಲ.. ಈ ಬಗ್ಗೆ ಶಿಕ್ಷಣೆ ಸಂಸ್ಥೆ ಮುಖ್ಯಸ್ಥ ಜೆಸ್ ಪಾಲ್ ಅವರ ಜತೆ ಪೋಷಕರು ಹಲವು ಬಾರಿ ಚರ್ಚಿಸಿದರೂ ಪ್ರಯೋಜನವಾಗದಾಗ, ಶಾಲೆಗೇ ಬಂದು ಪೋಷಕರು ತರಾಟೆಗೆ ತೆಗೆದುಕೊಂಡರು. ಇನ್ನೂ ಮಾಂಟೇನ್ಸರಿ ಹಾಗೂ ಅಲ್ಟ್ರನೇಟಿವ್ ಏಜುಕೇಷನ್ ಪದ್ದತಿ ಶಿಕ್ಷಣಕ್ಕೆ ಈ ಶಾಲೆಗೆ ಅನುಮತಿ ನೀಡಲಾಗಿದೆಯಾ ಎಂದು ಬಿಇಒ ಅವರನ್ನು ಕೇಳಿದರೆ ಅಸಡ್ಡೆಯ ುತ್ತರ ನೀಡಿದ್ದಾರೆ.

ನಾಯಿಕೊಡೆಗಳಂತೆ ಹರಡಿಕೊಂಡಿರುವ ಶಿಕ್ಷಣ ಸಂಸ್ಥೆಗಳು ವಸೂಲಿ ದಂಧೆಗೆ ಇಳಿದಿವೆ ಎನ್ನುವ ಆರೋಪ ಇದೆ. ಇದೀಗ ಲಾ ವಿಸ್ಡಮ್ ಶಿಕ್ಷಣ ಸಂಸ್ಥೆಯೂ ಇದೇ ಲಿಸ್ಟ್​ಗೆ ಸೇರಿದೆಯಾ. ಪೋಷಕರು ದೂರು ಕೊಟ್ಟ ಬಳಿಕ ತನಿಖೆಯಿಂದ ಗೊತ್ತಾಗಬೇಕಿದೆ.