ಟೀ ಕುಡಿಯಲು ಆನ್'ಲೈನ್'ನಲ್ಲಿಯೇ  ಮುಂಗಡ 7 ರೂ ಪಾವತಿಸಿದರೆ ಈತನ ಟೀ ಸ್ಟಾಲ್'ಗೆ ಬಂದು ಟೀ ಕುಡಿಯಬಹುದು. ಸ್ಥಳೀಯ ಬಹುತೇಕರು ಆನ್'ಲೈನ್'ನಲ್ಲಿ ಪಾವತಿಸಿ ಟೀ ಕುಡಿಯುತ್ತಿದ್ದಾರೆ.

ನವದೆಹಲಿ(ನ.13): ಕಾಳಸಂತೆ ಕೋರರಿಗೆ ಹಾಗೂ ತೆರಿಗೆ ವಂಚಕರಿಗೆ ಬಿಸಿ ಮುಟ್ಟಿಸುವ ಕಾರಣದಿಂದ ಕೇಂದ್ರ ಸರ್ಕಾರ 500 ಮತ್ತು 1000 ರೂ. ನೋಟುಗಳನ್ನು ರದ್ದುಗೊಳಿಸಿದ ಹಿನ್ನಲೆಯಲ್ಲಿ ಜನ ಸಾಮಾನ್ಯರಿಗೂ ಕೊಂಚ ತೊಂದರೆಯಾಗಿದೆ.

ತಮ್ಮ ದಿನನಿತ್ಯದ ಸರಕುಗಳನ್ನು ಕೊಳ್ಳಲು 100,50,20 ರೂಗಳ ನೋಟುಗಳನ್ನೇ ಅವಲಂಬಿಸಬೇಕಾಗಿದೆ. ಹಲವು ಎಟಿಎಂ'ಗಳಲ್ಲೂ ನೋಟುಗಳ ಕೊರತೆಯುಂಟಾಗಿದೆ. ಕೇಂದ್ರ ಅರ್ಥ ಸಚಿವ ಅರುಣ್ ಜೇಟ್ಲಿ ಕೂಡ ನೋಟುಗಳು ಸಾಮಾನ್ಯ ಪರಿಸ್ಥಿತಿಗೆ ಬರಲು ಇನ್ನು 3 ತಿಂಗಳು ಕಾಲ ಬೇಕಾಗುವುದು ಎಂದು ದೇಶದ ಜನತೆಗೆ ತಿಳಿಸಿದ್ದಾರೆ.

ನೋಟ್ ಬ್ಯಾನ್'ನಿಂದ ದೊಡ್ಡ ಮಟ್ಟದ ವ್ಯವಹಾರಗಳು ಆನ್'ಲೈನ್'ನಲ್ಲೆ ನಡೆಯುತ್ತಿದೆ. ದೆಹಲಿಯ ಆರ್.ಕೆ.ಪುರಂ'ನ ಬೀದಿ ಬದಿಯ ಟೀ ವ್ಯಾಪಾರಿ 'ಮೊನು' ಎಂಬಾತ ಆನ್'ಲೈನ್'ನಲ್ಲಿಯೇ ಟೀ ವ್ಯಾಪಾರ ಪ್ರಾರಂಭಿಸಿದ್ದಾನೆ. ಟೀ ಕುಡಿಯಲು ಆನ್'ಲೈನ್'ನಲ್ಲಿಯೇ ಮುಂಗಡ 7 ರೂ ಪಾವತಿಸಿದರೆ ಈತನ ಟೀ ಸ್ಟಾಲ್'ಗೆ ಬಂದು ಟೀ ಕುಡಿಯಬಹುದು. ಸ್ಥಳೀಯ ಬಹುತೇಕರು ಆನ್'ಲೈನ್'ನಲ್ಲಿ ಪಾವತಿಸಿ ಟೀ ಕುಡಿಯುತ್ತಿದ್ದಾರೆ.

ಹೋಟೆಲ್'ಗಳು ಹಾಗೂ ಇತರೆ ದಿನಸಿ ವ್ಯಾಪಾರಿಗಳು ಸಹ ದೆಹಲಿಯ ಟೀ ವ್ಯಾಪಾರಿಯ ತರ ಆನ್'ಲೈನ್'ನಲ್ಲಿಯೇ ವ್ಯವಹಾರ ಪ್ರಾರಂಭಿಸಿದರೆ ಹಲವಿ ಗ್ರಾಹಕರಿಗೆ ಉಪಯುಕ್ತವಾಗುವುದರಲ್ಲಿ ಸಂದೇಹವಿಲ್ಲ.