ಕೊರಿಯಾ (ಛತ್ತೀಸ್‌ಗಢ): ಟೀ ಅಂದ್ರೆ, ಯಾರಿಗೆ ತಾನೇ ಇಷ್ಟವಿಲ್ಲ? ಆದರೆ, ದಿನಕ್ಕೆ ಎಷ್ಟೇ ಟೀ ಕುಡಿದರೂ, ಆಹಾರ ಸೇವಿಸದೇ ಇರುವುದಿಲ್ಲ. ಆದರೆ, ಛತ್ತೀಸ್‌ಗಢದ ಕೊರಿಯಾ ಜಿಲ್ಲೆಯ ಬರದಿಯಾ ಗ್ರಾಮದ ಪಿಲ್ಲಿ ದೇವಿ(44) ಎಂಬ ಮಹಿಳೆ ಕಳೆದ 30 ವರ್ಷಗಳಿಂದ ಟೀ ಕುಡಿಯುವುದನ್ನು ಬಿಟ್ಟರೆ, ಬೇರೇನೂ ತಿಂದಿಲ್ಲ.

ಈ ಹಿನ್ನೆಲೆಯಲ್ಲಿ ಪಿಲ್ಲಿದೇವಿ ಅವರನ್ನು ‘ಚಹಾ ಮಹಿಳೆ’ ಎಂದೇ ಕರೆಯಲಾಗುತ್ತದೆ. ಟೀ ಕುಡಿಯುವ ಕಾಯಿಲೆಗೆ ಚಿಕಿತ್ಸೆ ಕೊಡಿಸಲು ಪಿಲ್ಲಿದೇವಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ ಎಂದು ಮಹಿಳೆ ಸಹೋದರ ಬಿಹಾರಿ ಲಾಲ್‌ ರಜ್ವಾಡೆ ತಿಳಿಸಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಮಹಿಳೆ ತಂದೆ ರತಿರಾಮ್‌, ತಮ್ಮ ಮಗಳು 6ನೇ ತರಗತಿ ಓದುವಾಗಲೇ ಆಹಾರ ಸೇವಿಸಿದ್ದನ್ನು ತ್ಯಜಿಸಿದರು. ಮೊದಲಿಗೆ ತಮ್ಮ ಮಗಳು ಹಾಲಿನ ಜೊತೆ ಬ್ರೆಡ್‌ ಮತ್ತು ಬಿಸ್ಕಟ್‌ಗಳನ್ನು ನೀಡಲಾಗುತ್ತಿತ್ತು. ಆದರೆ, ಕಾಲ ಕ್ರಮೇಣ ಪಿಲ್ಲಿದೇವಿ ಅವರು ಬಿಸ್ಕಟ್‌ ಮತ್ತು ಬ್ರೆಡ್‌ಗಳಿಗೆ ಗುಡ್‌ಬೈ ಹೇಳಿ, ಕೇವಲ ಕಪ್ಪು ಟೀ ಕುಡಿಯುವುದನ್ನು ರೂಢಿಸಿಕೊಂಡರು ಎಂದಿದ್ದಾರೆ.