ಬೆಂಗಳೂರು[ಜ.22] ಬೆಂಗಳೂರಿನಲ್ಲಿ ಇರುವ ಈ ಮಹಿಳೆಗೆ ಸಿದ್ಧಗಂಗಾ ಸ್ವಾಮೀಜಿ ಯಾರು ಎಂಬುದು ಗೊತ್ತಿಲ್ಲವಂತೆ! ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಕ್ಕೆ ಇವಳು ಟ್ವಿಟರ್‌ನಲ್ಲಿ ತನ್ನ ಅಭಿಪ್ರಾಯ ಬರೆದಿದ್ದಾರೆ. 

ಯಾಕೆ ಮತ್ತು ಯಾವ ಕಾರಣಕ್ಕೆ ಸರಕಾರಗಳು ಇಂಥ ಕ್ರಮ ತೆಗೆದುಕೊಳ್ಳುತ್ತವೆಯೋ ಗೊತ್ತಿಲ್ಲ. ಕಾರಣವಿಲ್ಲದೇ  ರಜೆ ಘೋಷಣೆ ಮಾಡುವ ಹವ್ಯಾಸ ಬದಲಾಬೇಕು. ಈ ಬಗ್ಗೆ ಮೀಟಿಂಗ್ ಮಾಡೋಣ ಎಂದು ಸಹ ಹೇಳಿದ್ದಾರೆ. 

ಮೋನಿಕಾ ಹೆಸರಿನ ಮಹಿಳೆ ಬೆಂಗಳೂರಿನಿಂದಲೇ ಟ್ವೀಟ್ ಮಾಡಿದ್ದಾರೆ. ಇವರ ಹೇಳಿಕೆ ಗಮನಿಸಿದರೆ ಯಾವುದೋ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷೆ ಆಗಿರಬಹದು ಎಂದು ಭಾವಿಸಬಹುದು.