ಚಿನ್ನ ಕದಿಯಲು ಬಂದ ಕಳ್ಳರಿಗೆ ಆಯ್ತು ಶಾಸ್ತಿ

news | Friday, March 16th, 2018
Suvarna Web Desk
Highlights

ಚಿನ್ನದ ಆಭರಣದಲ್ಲಿ ವ್ಯತ್ಯಾಸವಾಗಿದೆ ಎಂದು ಪರಿಶೀಲಿಸಿದ ವೀಣಾ ಅವರು ಕದ್ದ  ವಿಷಯ ಗೊತ್ತಾಗಿ ಕಳ್ಳರಿಗೆ ಸಕತ್ ಗೂಸಾ ನೀಡಿದ್ದಾರೆ.

ದಾವಣಗೆರೆ(ಮಾ.16): ಪಾಲಿಷ್‌‌‌ ಮಾಡುವ ನೆಪದಲ್ಲಿ‌ ಚಿನ್ನ ಕದಿಯಲು ಬಂದ ಕಳ್ಳರಿಗೆ ಹರಿಹರದಲ್ಲಿ ತಕ್ಕ ಶಾಸ್ತಿಯಾಗಿದೆ. ಉತ್ತರ ಪ್ರದೇಶ ಮೂಲದ ಕಳ್ಳರು ಚಿನ್ನ ಬೆಳ್ಳಿಪಾಲಿಷ್ ಮಾಡುವ ನೆಪದಲ್ಲಿ ಹರಿಹರದ ಗುತ್ತೂರಿಗೆ ಬಂದಿದ್ದಾರೆ. ವೀಣಾ ಎಂಬುವರ ಬೆಳ್ಳಿ ಅಭರಣ ಪಡೆದು ಪಾಲಿಶ್ ಮಾಡಿದ್ದರು. ಬಳಿಕ ಚಿನ್ನದ ಆಭರಣಗಳನ್ನು ಕೇಳಿದ್ದರು. ಪಾಲಿಶ್ ಮಾಡುವಾಗ  ಮಹಿಳೆಯ ಕಣ್ಣುತಪ್ಪಿಸಿ ಚಿನ್ನಾಭರಣ ಲಪಟಾಯಿಸಿದ ಕಳ್ಳರು ಇನ್ನೇನು ಹೊರಡುವ ಸ್ಥಿತಿಯಲ್ಲಿದ್ದರು. ಏಕೋ ಚಿನ್ನದ ಆಭರಣದಲ್ಲಿ ವ್ಯತ್ಯಾಸವಾಗಿದೆ ಎಂದು ಪರಿಶೀಲಿಸಿದ ವೀಣಾ ಅವರು ಕದ್ದ  ವಿಷಯ ಗೊತ್ತಾಗಿ ಕಳ್ಳರಿಗೆ ಸಕತ್ ಗೂಸಾ ನೀಡಿದ್ದಾರೆ. ಈ ಸಂದರ್ಭದಲ್ಲಿ  ಮೂವರಲ್ಲಿ  ಇಬ್ಬರು ಪರಾರಿಯಾಗಿ  ಒಬ್ಬ ಸಿಕ್ಕಿಬಿದ್ದಿದ್ದಾನೆ. ಸಿಕ್ಕ ಕಳ್ಳನನ್ನು ಗ್ರಾಮಸ್ಥರು ಚೆನ್ನಾಗಿ ಥಳಿಸಿದ್ದಾರೆ.

Comments 0
Add Comment