ಬಿಎಂಟಿಸಿ ,ಕೆಎಸ್​ಆರ್​ಟಿಸಿ , ಮೆಟ್ರೋ ಸೇವೆಯಲ್ಲಿ  ವ್ಯತ್ಯಯವಾಗುವ ಸಾಧ್ಯತೆ ಇದೆ.  ಸರ್ಕಾರಿ ಕಚೇರಿಯ  ಸೇವೆಗಳು ಸಿಗುವುದ ಅನುಮಾನವಾಗಿದೆ.  ಹಾಗೆಯೇ ಪೆಟ್ರೋಲ್ ಬಂಕ್​​ , ಸಿನಿಮಾ ಪ್ರದರ್ಶನದ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ.

ಬೆಂಗಳೂರು (ನ.26): ಕಾಂಗ್ರೆಸ್‌ ಪಕ್ಷದ ವತಿಯಿಂದ ಸೋಮವಾರ ಆಕ್ರೋಶ್‌ ದಿವಸ್‌ ಆಚರಣೆಗೆ ಕರೆ ನೀಡಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಂದು ನಡೆಯಬೇಕಿದ್ದ ಬೆಂಗಳೂರು ವಿವಿಯ 3 ಮತ್ತು 5 ನೇ ಸೆಮಿಸ್ಟರ್‌ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಅಂದು ನಡೆಯ ಬೇಕಾದ ಪರೀಕ್ಷೆಗಳನ್ನು ಡಿಸೆಂಬರ್‌ 8ಕ್ಕೆ ನಡೆಸುವುದಾಗಿ ವಿವಿ ಪ್ರಕಟಣೆಯಲ್ಲಿ ತಿಳಿಸಿದೆ. ಭಾರತ್ ಬಂದ್ ಹಿನ್ನೆಲೆಯಲ್ಲಿ ದೈನಂದಿನ ವಸ್ತುಗಳು ಲಭ್ಯವಾಗಲಿದೆ.

ಆದರೆ, ಬಿಎಂಟಿಸಿ ,ಕೆಎಸ್​ಆರ್​ಟಿಸಿ , ಮೆಟ್ರೋ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಸರ್ಕಾರಿ ಕಚೇರಿಯ ಸೇವೆಗಳು ಸಿಗುವುದ ಅನುಮಾನವಾಗಿದೆ. ಹಾಗೆಯೇ ಪೆಟ್ರೋಲ್ ಬಂಕ್​​ , ಸಿನಿಮಾ ಪ್ರದರ್ಶನದ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ.