ಯೋಗೀಶ್ ಗೌಡ ಕೊಲೆ ಪ್ರಕರಣದ ಎಕ್ಸ್ಲೂಸಿವ್ ವಿಚಾರವನ್ನು ಸುವರ್ಣನ್ಯೂಸ್ ಪ್ರಸಾರ ಮಾಡುತ್ತಿದ್ದಂತೆ ವಿಧಾನ ಪರಿಷತ್, ವಿಧಾನ ಸಭೆಯಲ್ಲಿ ಪ್ರತಿಧ್ವನಿಸಿತು. ವರದಿಯನ್ನು ನೋಡಿ  ಸರ್ಕಾರವೇ ಬೆಚ್ಚಿಬಿದ್ದಿದೆ.  ನನಗೂ, ಈ ಕೊಲೆಗೂ ಯಾವುದೇ ಸಂಬಂಧವಿಲ್ಲ ಎಂದು ಧಾರವಾಡದಲ್ಲಿ ಗಣಿ, ಭೂ ವಿಜ್ಞಾನ ಸಚಿವ ವಿನಯ್​ ಕುಲಕರ್ಣಿ ಹೇಳಿದ್ದಾರೆ.  

ಬೆಂಗಳೂರು (ನ.23): ಯೋಗೀಶ್ ಗೌಡ ಕೊಲೆ ಪ್ರಕರಣದ ಎಕ್ಸ್ಲೂಸಿವ್ ವಿಚಾರವನ್ನು ಸುವರ್ಣನ್ಯೂಸ್ ಪ್ರಸಾರ ಮಾಡುತ್ತಿದ್ದಂತೆ ವಿಧಾನ ಪರಿಷತ್, ವಿಧಾನ ಸಭೆಯಲ್ಲಿ ಪ್ರತಿಧ್ವನಿಸಿತು. ವರದಿಯನ್ನು ನೋಡಿ ಸರ್ಕಾರವೇ ಬೆಚ್ಚಿಬಿದ್ದಿದೆ. ನನಗೂ, ಈ ಕೊಲೆಗೂ ಯಾವುದೇ ಸಂಬಂಧವಿಲ್ಲ ಎಂದು ಧಾರವಾಡದಲ್ಲಿ ಗಣಿ, ಭೂ ವಿಜ್ಞಾನ ಸಚಿವ ವಿನಯ್​ ಕುಲಕರ್ಣಿ ಹೇಳಿದ್ದಾರೆ.

ಕೊಲೆ ಆರೋಪಿಗಳು ಜೈಲಿನಲ್ಲಿದ್ದಾರೆ, ಪ್ರಕರಣ ನ್ಯಾಯಾಲಯದಲ್ಲಿದೆ. Dysp ಸುಲ್ಫಿ ಬೆಳಗಾವಿಯಲ್ಲಿದ್ದಾರೆ. ಅವರ್ಯಾರು ನನಗೆ ಪರಿಚಯವಿಲ್ಲ. ಮನೆಯಲ್ಲಿದ್ದವರನ್ನು ಕರೆದುಕೊಂಡು ಬಂದು ರಾಜಕಾರಣ ಮಾಡುತ್ತಿದ್ದಾರೆ. ಇದು ಬಿಜೆಪಿಯ ಕುತಂತ್ರ. ಇದರ ಹಿಂದೆ ಯಾರಿದ್ದಾರೆ ಎಂಬುದು ಗೊತ್ತು. ಇನ್ನೆರಡು ದಿನಗಳಲ್ಲಿ ಅವರ ಹೆಸರು ಬಹಿರಂಗಪಡಿಸುವೆ. ಬಿಜೆಪಿಗೆ ಬೇರೆ ವಿಷಯ ಇಲ್ಲ, ಹೀಗಾಗಿ ಕೊಲೆ ಪ್ರಕರಣದಲ್ಲಿ ನನ್ನ ಹೆಸರು ಎಳೆದು ತರುತ್ತಿದ್ದಾರೆ. ಲಿಂಗಾಯತ ಹೋರಾಟಕ್ಕೆ ಹೆದರಿ ಬಿಜೆಪಿ ನಾಯಕರು ಇಂತಹ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ನಾನು ಹೆದರುವುದಿಲ್ಲ ಎಂದ ಸಚಿವ ವಿನಯ ಕುಲಕರ್ಣಿ ಪ್ರತಿಕ್ರಿಯಿಸಿದ್ದಾರೆ.