ಶಿಕ್ಷಣ ಸಚಿವರೇ ಇದು ನೀವು ನೋಡಲೇಬೇಕಾದ ಸುದ್ದಿ. ಪ್ರಾಥಾಮಿಕ ಶಾಲೆಯ ಮಕ್ಕಳ ಈ ಗೋಳಿನ ಕಥೆಯನ್ನ ನೋಡಿದರೆ ಕಣ್ಣೀರು ಬರುತ್ತೆ. ಕಳೆದ 17 ವರ್ಷಗಳಿಂದ ಸರ್ಕಾರಿ ಶಾಲೆ ಮಕ್ಕಳು ಪಡುತ್ತಿರುವ ಗೋಳಿನ ಕತೆ ಇದು.

ಬೆಂಗಳೂರು (ನ.25): ಶಿಕ್ಷಣ ಸಚಿವರೇ ಇದು ನೀವು ನೋಡಲೇಬೇಕಾದ ಸುದ್ದಿ. ಪ್ರಾಥಾಮಿಕ ಶಾಲೆಯ ಮಕ್ಕಳ ಈ ಗೋಳಿನ ಕಥೆಯನ್ನ ನೋಡಿದರೆ ಕಣ್ಣೀರು ಬರುತ್ತೆ. ಕಳೆದ 17 ವರ್ಷಗಳಿಂದ ಸರ್ಕಾರಿ ಶಾಲೆ ಮಕ್ಕಳು ಪಡುತ್ತಿರುವ ಗೋಳಿನ ಕತೆ ಇದು.

ಬಯಲಲ್ಲೇ ಪಾಠ, ಆಟ, ಕೂತು ಪಾಠ ಕೇಳುವುದಕ್ಕೂ ಸರಿಯಾದ ಜಾಗವಿಲ್ಲ. ಪಕ್ಕದಲ್ಲೇ ತಿಪ್ಪೆ ಗುಂಡಿ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮಲ್ಲಯ್ಯನದೊಡ್ಡಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ ಇದು. ಇದು ಇಂದು ನಿನ್ನೆಯ ಸಮಸ್ಯೆಯಲ್ಲ. 17 ವರ್ಷಗಳಿಂದಲೂ ಇದೇ ಶೋಚನೀಯ ಸ್ಥಿತಿಯಲ್ಲಿ ಪಾಠ ಕಲೀತಿದ್ದಾರೆ ಈ ನತದೃಷ್ಟ ಮಕ್ಕಳು. ಈ ಶಾಲೆಗೆ ಸ್ವಂತ ಕಟ್ಟಡವಿಲ್ಲ. ಗ್ರಾಮದ ಅಪ್ಪಾಜಿ ಅನ್ನೋರು ತಮ್ಮ ಮನೆಯ ಕೊಠಡಿಯೊಂದನ್ನೇ ಕೊಟ್ಟಿದ್ದಾರೆ. 27 ಮಕ್ಕಳು, ಇಬ್ಬರು ಶಿಕ್ಷಕರಿರೋದ್ರಿಂದ ಜಾಗ ಸಾಕಾಗಲ್ಲ. ಹೀಗಾಗೇ ಬಯಲಲ್ಲೇ ಪಾಠ ಕೇಳಬೇಕಾದ ಸ್ಥಿತಿ ಒದಗಿದೆ. ಇನ್ನೂ ಸ್ವಂತ ಕಟ್ಟಡ ಕಟ್ಟಿಸಿಕೊಡಿ ಎಂದರೆ ಅಧಿಕಾರಿಗಳು ಜಾಗವಿಲ್ಲ ಅನ್ನೋ ಸಬೂಬು ಹೇಳುತ್ತಿದ್ದರು. ಆದರೀಗ ಅಪ್ಪಾಜಿವರು ತಮ್ಮದೇ ಜಾಗವನ್ನು ದಾನವಾಗಿ ನೀಡಿದರೂ ಚನ್ನಪಟ್ಟಣ ಬಿಇಓ ಸಾಹೇಬರೂ ಡಿಡಿಪಿಐ ಕೇಳಬೇಕು. ಹಾಗೇ ಹೀಗೆ ಅಂತಾ ದಿನ ದೂಡುತ್ತಿದ್ದಾರೆ.

ಮಾನ್ಯ ಶಿಕ್ಷಣ ಸಚಿವರೇ ಈ ಮಕ್ಕಳಿಗೆ ಯಾಕಿಂತಾ ಶಿಕ್ಷೆ? ಮಕ್ಕಳೇ ಇಲ್ಲ ಅಂತಾ ಸರ್ಕಾರಿ ಶಾಲೆ ಮುಚ್ಚೋಕೆ ಮುಂದಾಗಿರೋ ಸರ್ಕಾರಕ್ಕೆ ಈ ಮಕ್ಕಳಿಗೊಂದು ಸೂರು ಕಲ್ಪಿಸೋಕು ಆಗಲ್ಲ ಅನ್ನೋದು ನಾಚಿಕೆಗೇಡಿನ ಸಂಗತಿ.