ಒಂದು ವರ್ಷದಿಂದ ನಿರ್ಮಾಣ ಕಾರ್ಯ ನಡೆದಿದ್ದ ಈ ರೆಸ್ಟೋರೆಂಟ್, ಕಳೆದ ತಿಂಗಳಷ್ಟೇ ತೆರೆಯಲ್ಪಟ್ಟಿದೆ. 72 ಸೀಟುಗಳ ಹವಾಯಿ ಅಡ್ಡಾದಲ್ಲಿ ಸಸ್ಯಾಹಾರಿ ಆಹಾರ ಪೂರೈಕೆಯಾಗುತ್ತದೆ.

ಲೂಧಿಯಾನಾ(ಫೆ.12): ದೆಹಲಿ ಮೂಲದ ಪ್ರವಾಸೋದ್ಯಮ ಸಂಸ್ಥೆಯೊಂದು ಬಳಕೆಯಲ್ಲಿಲ್ಲದ ಏರ್‌'ಬಸ್ 320 ಅನ್ನು ಐಶಾರಾಮಿ ರೆಸ್ಟೋರೆಂಟ್ ಆಗಿ ಪರಿವರ್ತಿಸಿ ಗಮನ ಸೆಳೆದಿದೆ.

ಲೂಧಿಯಾನದಲ್ಲಿ ತಮ್ಮ ಗ್ರಾಹಕರಿಗೆ ವಿಶಿಷ್ಟ ಅನುಭವ ನೀಡಲು ಏರ್ ಇಂಡಿಯಾದ ಹಳೆಯ ವಿಮಾನವನ್ನು ಬಳಸಿಕೊಂಡು ‘ಹವಾಯಿ ಅಡ್ಡ (ವಿಮಾನ ನಿಲ್ದಾಣ)’ ಎಂಬ ಹೆಸರಿನ ಈ ರೆಸ್ಟೋರೆಂಟ್ ಅನ್ನು ನಿರ್ಮಿಸಲಾಗಿದೆ.

ಒಂದು ವರ್ಷದಿಂದ ನಿರ್ಮಾಣ ಕಾರ್ಯ ನಡೆದಿದ್ದ ಈ ರೆಸ್ಟೋರೆಂಟ್, ಕಳೆದ ತಿಂಗಳಷ್ಟೇ ತೆರೆಯಲ್ಪಟ್ಟಿದೆ. 72 ಸೀಟುಗಳ ಹವಾಯಿ ಅಡ್ಡಾದಲ್ಲಿ ಸಸ್ಯಾಹಾರಿ ಆಹಾರ ಪೂರೈಕೆಯಾಗುತ್ತದೆ.

ಒಂದು ಕೆಫೆ, ಬೇಕರಿ ಸೇರಿದಂತೆ ಸುಮಾರು 40 ಜನ ಭಾಗವಹಿಸಬಹುದಾದ ಪಾರ್ಟಿಹಾಲ್ ಕೂಡ ಹವಾಯಿ ಅಡ್ಡದಲ್ಲಿದೆ. ಪೀಠೋಪಕರಣಗಳನ್ನು ಹೊರತುಪಡಿಸಿ, ವಿಮಾನದ ಉಳಿದೆಲ್ಲ ಮೂಲ ಲಕ್ಷಣಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.