ರಾಂಗ್ ನಂಬರ್ ಡಯಲ್ ಮಾಡುವುದರಿಂದ ಆರಂಭವಾದ ಪ್ರೇಮ ಕತೆ ಹೆಂಡತಿಯನ್ನು ತುಂಡರಿಸಿ ಬಾಕ್ಸ್‌ವೊಂದರಲ್ಲಿ ಪಾರ್ಸಲ್ ಮಾಡುವುದರಲ್ಲಿ ಮುಕ್ತಾಯವಾಗಿದೆ. 2010ರಲ್ಲಿ ಆರಂಭವಾದ ಪ್ರೇಮ ಕಹಾನಿ 2018ರಲ್ಲಿ ದುರಂತ ಅಂತ್ಯ ಕಂಡಿದ್ದು ಇಬ್ಬರು ಮಕ್ಕಳು ಇದೀಗ ಅನಾಥರಾಗಿದ್ದಾರೆ.
ನವದೆಹಲಿ[ಜೂ.27] ರಾಂಗ್ ನಂಬರ್ ಡಯಲ್ ಮಾಡುವುದರಿಂದ ಆರಂಭವಾದ ಪ್ರೇಮ ಕತೆ ಹೆಂಡತಿಯನ್ನು ತುಂಡರಿಸಿ ಬಾಕ್ಸ್‌ವೊಂದರಲ್ಲಿ ಪಾರ್ಸಲ್ ಮಾಡುವುದರಲ್ಲಿ ಮುಕ್ತಾಯವಾಗಿದೆ. 2010ರಲ್ಲಿ ಆರಂಭವಾದ ಪ್ರೇಮ ಕಹಾನಿ 2018ರಲ್ಲಿ ದುರಂತ ಅಂತ್ಯ ಕಂಡಿದ್ದು ಇಬ್ಬರು ಮಕ್ಕಳು ಇದೀಗ ಅನಾಥರಾಗಿದ್ದಾರೆ.
ಜುಲೈ 21 ರಂದು ಮಹಿಳೆಯ ಶವವಿದ್ದ ಪೆಟ್ಟಿಗೆಯೊಂದು ದೆಹಲಿ ಪೊಲೀಸರಿಗೆ ದೊರೆಯುತ್ತದೆ. ಆದರೆ ಅದರೊಳಗೆ ಇಂಥ ಘೋರ ಕತೆ ಇರುತ್ತದೆ ಎಂದು ಸ್ವತಃ ಅವರೇ ಭಾವಿಸಿರಲಿಲ್ಲ. ಸುಳಿವಿನ ಬೆನ್ನತ್ತಿದ್ದ ಪೊಲೀಸರು ಹತ್ಯೆಯಾದ ಮಹಿಳೆಯ ಗಂಡ ಮತ್ತು ಹತ್ಯೆಗೆ ನೆರವು ನೀಡಿದ ಆತನ ಸಹೋದರರನ್ನು ಬಂಧಿಸಿದ್ದಾರೆ.
ಸಜೀದ್ 2010ರಲ್ಲಿ ಗೊತ್ತಿಲ್ಲದ ನಂಬರ್‌ಗೆ ಕಾಲ್ ಮಾಡುತ್ತಾನೆ. ಜುಹಿ ಎನ್ನುವ ಹುಡುಗಿ ಈ ಮೂಲಕ ಪರಿಚಯವಾಗಿ ಅವರಿಬ್ಬರ ನಡುವೆ ಸ್ನೇಹ ಬೆಳೆದು, ನಂತರ ಪ್ರೇಮಕ್ಕೆ ತಿರುಗಿ ವಿವಾಹವಾಗುತ್ತಾರೆ. ಆದರೆ ಈಗ ಪ್ರೀತಿಸಿದ ಗಂಡನೇ ಆಕೆಯ ಹತ್ಯೆ ಮಾಡಿ ಪೆಟ್ಟಿಗೆ ತುಂಬಿದ್ದಾನೆ.
2014ರಲ್ಲಿ ವಿವಾಹವಾಗುವ ಜೋಡಿಗೆ ಇಬ್ಬರು ಮಕ್ಕಳು ಇದ್ದಾರೆ. ಬೇರೆ ಮಹಿಳೆಯೊಂದಿಗಿನ ಅಕ್ರಮ ಸಂಬಂದ ಹೆಂಡತಿಗೆ ಗೊತ್ತಾಗಿದ್ದು ಮುಂದೆ ಅಪಾಯ ಆಗಬಹುದು ಎಂಬ ಸಂಗತಿಯೇ ಕೊಲೆಗೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ.
