ಕಪ್ಪು ಹಣ ಹಾಗೂ ಖೋಟಾನೋಟು ಹಾವಳಿಯನ್ನು ಮಟ್ಟ ಹಾಕಲು ಪ್ರಧಾನಿ ನರೇಂದ್ರ ಮೋದಿ ಅವರು 500, 1000 ರು. ಮುಖಬೆಲೆಯ ನೋಟುಗಳ ನಿಷೇಧ ಘೋಷಿಸಿ ವರ್ಷವಾಗುತ್ತಾ ಬಂದರೂ, ರಿಸರ್ವ್ ಬ್ಯಾಂಕಿಗೆ ಮರಳಿದ ನಿಷೇಧಿತ ನೋಟಿನ ಮೌಲ್ಯ ಎಷ್ಟು, ಅದರಲ್ಲಿ ಖೋಟಾ ನೋಟು ಪಾಲು ಎಷ್ಟು ಎಂಬುದು ಇನ್ನೂ ನಿಗೂಢವಾಗಿದೆ.
ನವದೆಹಲಿ(ಅ.30): ಕಪ್ಪು ಹಣ ಹಾಗೂ ಖೋಟಾನೋಟು ಹಾವಳಿಯನ್ನು ಮಟ್ಟ ಹಾಕಲು ಪ್ರಧಾನಿ ನರೇಂದ್ರ ಮೋದಿ ಅವರು 500, 1000 ರು. ಮುಖಬೆಲೆಯ ನೋಟುಗಳ ನಿಷೇಧ ಘೋಷಿಸಿ ವರ್ಷವಾಗುತ್ತಾ ಬಂದರೂ, ರಿಸರ್ವ್ ಬ್ಯಾಂಕಿಗೆ ಮರಳಿದ ನಿಷೇಧಿತ ನೋಟಿನ ಮೌಲ್ಯ ಎಷ್ಟು, ಅದರಲ್ಲಿ ಖೋಟಾ ನೋಟು ಪಾಲು ಎಷ್ಟು ಎಂಬುದು ಇನ್ನೂ ನಿಗೂಢವಾಗಿದೆ.
ಈ ಕುರಿತು ಮಾಹಿತಿ ಹಕ್ಕು ಕಾಯ್ದೆ (ಆರ್ ಟಿಐ)ಯಡಿ ಉತ್ತರ ಕೇಳಿದಾಗ, ‘ಅತ್ಯಾಧುನಿಕ ನೋಟು ಎಣಿಕೆ ಯಂತ್ರಗಳನ್ನು ಬಳಸಿ, ಎಣಿಸುವ ಕಾರ್ಯ ಪ್ರಗತಿಯಲ್ಲಿದೆ’ ಎಂಬ ಉತ್ತರ ಲಭಿಸಿದೆ. ಸೆ.30ರವರೆಗೆ 500 ರು. ಮುಖಬೆಲೆಯ 1135 ಕೋಟಿ ನಿಷೇಧಿತ ನೋಟು, 1000 ರು. ಮುಖಬೆಲೆಯ 524.90 ಕೋಟಿ ರದ್ದಾದ ನೋಟುಗಳನ್ನು ಎಣಿಕೆ ಮಾಡಲಾಗಿದೆ. ಇವುಗಳ ಮೌಲ್ಯ ಕ್ರಮವಾಗಿ 5.67 ಲಕ್ಷ ಕೋಟಿ ಹಾಗೂ 5.24 ಲಕ್ಷ ಕೋಟಿ ರು. ಅಂದರೆ, 10.91 ಲಕ್ಷ ಕೋಟಿ ರು. ಆಗುತ್ತದೆ. ನೋಟಿನ ಎಣಿಕೆ ಮುಂದುವರಿದಿದೆ ಎಂದು ಆರ್'ಟಿಐನಡಿ ಆರ್ ಬಿಐ ಉತ್ತರಿಸಿದೆ. 2016ರ ನ.8ರಂದು ಪ್ರಧಾನಿ ಮೋದಿ ಅಪನಗದೀಕರಣ ಘೋಷಿಸಿದ್ದರು.
