ರಾಕೆಟ್, ಕ್ಷಿಪಣಿ, ರಾಸಾಯನಿಕ ಅಸ್ತ್ರ, ಅಣ್ವಸ್ತ್ರ ದಾಳಿಗಳನ್ನು ಕಂಡಿದ್ದ ಜಗತ್ತು, ಮತ್ತೊಂದು ವಿನಾಶಕಾರಿ ಅಸ್ತ್ರದ ಅಪಾಯವನ್ನು ಎದುರಿಸಲು ಸಿದ್ಧವಾಗಬೇಕಾಗಿ ಬಂದಿದೆಯೇ? ಕಮ್ಯುನಿಸ್ಟ್ ರಾಷ್ಟ್ರ ಕ್ಯೂಬಾದಲ್ಲಿ ಕಳೆದ ಕೆಲ ತಿಂಗಳನಿಂದ ನಿಗೂಢವಾಗಿ ನಡೆದ ಕೆಲ ಘಟನೆಗಳು ಇಂಥದ್ದೊಂದು ಪ್ರಶ್ನೆಯನ್ನು ಹುಟ್ಟುಹಾಕಿವೆ.
ಹವಾನಾ/ವಾಷಿಂಗ್ಟನ್(ಸೆ.19): ರಾಕೆಟ್, ಕ್ಷಿಪಣಿ, ರಾಸಾಯನಿಕ ಅಸ್ತ್ರ, ಅಣ್ವಸ್ತ್ರ ದಾಳಿಗಳನ್ನು ಕಂಡಿದ್ದ ಜಗತ್ತು, ಮತ್ತೊಂದು ವಿನಾಶಕಾರಿ ಅಸ್ತ್ರದ ಅಪಾಯವನ್ನು ಎದುರಿಸಲು ಸಿದ್ಧವಾಗಬೇಕಾಗಿ ಬಂದಿದೆಯೇ? ಕಮ್ಯುನಿಸ್ಟ್ ರಾಷ್ಟ್ರ ಕ್ಯೂಬಾದಲ್ಲಿ ಕಳೆದ ಕೆಲ ತಿಂಗಳನಿಂದ ನಿಗೂಢವಾಗಿ ನಡೆದ ಕೆಲ ಘಟನೆಗಳು ಇಂಥದ್ದೊಂದು ಪ್ರಶ್ನೆಯನ್ನು ಹುಟ್ಟುಹಾಕಿವೆ.
ಚಲನಚಿತ್ರಗಳಲ್ಲಿ ಕಾಲ್ಪನಿಕವಾಗಿ ಬಳಸುತ್ತಿದ್ದ ಸೋನಿಕ್ ಅಥವಾ ಶಬ್ದಸ್ಫೋಟವೆಂಬ ನಿಗೂಢವಾಗಿ ಕಾರ್ಯನಿರ್ವಹಿಸಬಲ್ಲ ಶಕ್ತಿಶಾಲಿ ಅಸ್ತ್ರವೊಂದನ್ನು ಬಳಸಿರುವ ಅನುಮಾನವೊಂದು ವ್ಯಕ್ತವಾಗಿದೆ. ಈ ಅನುಮಾನ ನಿಜವಾಗಿದ್ದೇ ಆದಲ್ಲಿ ಮತ್ತು ಇದನ್ನು ಪ್ರಯೋಗಿಸಿದ ಶಕ್ತಿಗಳ ಬಗ್ಗೆ ಇರುವ ಅನುಮಾನ ನಿಜವಾದಲ್ಲಿ, ಅದು ಜಗತ್ತನ್ನು ಮೂರನೇ ಮಹಾಯುದ್ಧದತ್ತ ಕೊಂಡೊಯ್ದರೂ ಅಚ್ಚರಿ ಇಲ್ಲ ಎಂದು ಹೇಳಲಾಗಿದೆ.
ನಿಜ. 50 ವರ್ಷಗಳ ಬಳಿಕ ಕ್ಯೂಬಾದ ಜೊತೆ ರಾಜತಾಂತ್ರಿಕ ಸಂಬಂ‘ ಮರುಸ್ಥಾಪಿಸಿದ್ದ ಅಮೆರಿಕಕ್ಕೆ ಇದೀಗ ಹೊಸ ಸಮಸ್ಯೆ ಎದುರಾಗಿದೆ. ಕ್ಯೂಬಾದ ರಾಜ‘ಾನಿ ಹವಾನದಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಸಿಬ್ಬಂದಿ ಕಳೆದ ಕೆಲ ತಿಂಗಳುಗಳಿಂದ ವಿಚಿತ್ರ ಸಮಸ್ಯೆಗೆ ತುತ್ತಾಗುತ್ತಿದ್ದಾರೆ.
ಕೆಲ ಸಿಬ್ಬಂದಿಗೆ ಇದ್ದಕ್ಕಿದ್ದಂತೆ ವಾಕರಿಕೆ ಬರುತ್ತಿದ್ದರೆ, ಇನ್ನು ಕೆಲವರಿಗೆ ಸುಖಾಸುಮ್ಮನೆ ತಲೆ ಸುತ್ತುವುದು, ಕೆಲ ಶಬ್ದಗಳನ್ನು ಉಚ್ಚರಿಸಲೇ ಸಾಧ್ಯವಾಗದೇ ಇರುವುದು, ನೆನಪಿನ ಶಕ್ತಿಯೇ ಇಲ್ಲವಾಗಿ ಹೋಗುವುದು, ಇದ್ದಕ್ಕಿದ್ದಂತೆ ಯಾರೋ ಬಂದು ಹೊಡೆದಂತಾಗಿ ಕೆಳಗೆ ಬೀಳುವುದು, ಶಾಶ್ವತ ಕಿವುಡುತನ, ತಲೆ ನೋವು, ಕಿವಿ ನೋವು ಮೊದಲಾದ ಸಮಸ್ಯೆಗಳು ಕಾಡತೊಡಗಿವೆ. ಇತ್ತೀಚೆಗೆ ಒಬ್ಬ ಅಧಿಕಾರಿಯಂತೂ ರಾತ್ರಿ ಮಲಗಿದ್ದ ವೇಳೆ ಮಂಚದಿಂದ ಕೆಳಗೆ ಎಸೆಯಲ್ಪಟ್ಟಿದ್ದಾರೆ. ಮತ್ತೆ ಎದ್ದು ಬಂದು ಮಲಗಿದರೂ ಅದೇ ಅನುಭವವಾಗಿದೆ.
ಹೀಗೆ ಕಳೆದ ಕೆಲ ತಿಂಗಳಲ್ಲಿ ವಿಚಿತ್ರ ಅನುಭವಕ್ಕೆ ಒಳಗಾದ ಅಮೆರಿಕ ರಾಯಭಾರ ಕಚೇರಿಯ ಸಿಬ್ಬಂದಿ ಸಂಖ್ಯೆ 21 ದಾಟಿದೆ. ಅತ್ಯಂತ ರಹಸ್ಯವಾಗಿಯೇ ಇದ್ದ ಈ ಘಟನೆ ಇದೀಗ ಬೆಳಕಿಗೆ ಬಂದಿದೆ. ಎಫ್'ಬಿಐನೂ ಕಂಗಾಲು:
ಇಂಥದ್ದೊಂದು ವಿಚಿತ್ರ ಘಟನೆ ಕ್ಯೂಬಾ ಮತ್ತು ಅಮೆರಿಕ ಎರಡೂ ದೇಶಗಳನ್ನು ಕಂಗಾಲಾಗಿಸಿದೆ. ಈ ಕುರಿತು ಅಮೆರಿಕದ ತನಿಖಾ ಸಂಸ್ಥೆ ಎಫ್'ಬಿಐ ಸಾಕಷ್ಟು ಪರಿಶೀಲನೆ ನಡೆಸಿದರೂ, ಅದಕ್ಕೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಕಣ್ಣಿಗೆ ಕಾಣದಂತೆಯೇ ನಡೆಯುತ್ತಿರುವ ಈ ಘಟನೆಗಳು ಯಾವುದೋ ಅತಿಮಾನವ ಶಕ್ತಿಯಿಂದ ನಡೆದಿದ್ದು ಎಂಬುದನ್ನು ಅಮೆರಿಕ ನಂಬುತ್ತಿಲ್ಲ. ಹೀಗಾಗಿ ಅದು ವೈಜ್ಞಾನಿಕ ಹಿನ್ನೆಲೆಯಲ್ಲಿ ಘಟನೆಯನ್ನು ತನಿಖೆಗೆ ಗುರಿಪಡಿಸಿದ್ದು, ಈ ವೇಳೆ ಇದು ಸೋನಿಕ್ ಅಟ್ಯಾಕ್ (ಶಬ್ದ ಸ್ಫೋಟ) ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಸೋನಿಕ್ ಅಟ್ಯಾಕ್'ನಿಂದಾಗಿ ಪ್ರಾಣಾಪಾಯ ಸಂ‘ವಿಸದೇ ಹೋದರೂ ಅದು ವ್ಯಕ್ತಿಯ ಶ್ರವಣ ಶಕ್ತಿ ಸೇರಿದಂತೆ ಮೆದುಳಿನ ಮೇಲೆ ಭಾರೀ ಹಾನಿ ಉಂಟು ಮಾಡಬಲ್ಲದು. ವಿವಿಧ ರೀತಿಯ ಸಮಸ್ಯೆಗೆ ಒಳಗಾದ ಅಮೆರಿಕ ರಾಯಭಾರ ಕಚೇರಿ ಸಿಬ್ಬಂದಿಯನ್ನು ತಪಾಸಣೆಗೆ ಗುರಿಪಡಿಸಿದಾಗ ಅವರೆಲ್ಲಾ ಬಹುತೇಕ ಇದೇ ರೀತಿಯ ದಾಳಿಗೆ ತುತ್ತಾಗಿರುವ ಲಕ್ಷಣಗಳು ಕಂಡುಬಂದಿವೆ. ಆದರೆ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುವ ಒಬ್ಬೊಬ್ಬ ಸಿಬ್ಬಂದಿಗೆ ಒಂದು ರೀತಿಯ ಅನು‘ವ ಆಗಿರುವುದು ಅಮೆರಿಕದ ತಜ್ಞರನ್ನು ಮತ್ತಷ್ಟು ಚಿಂತೆಗೆ ಗುರಿ ಮಾಡಿದೆ.
ಸಮಸ್ಯೆಗೆ ಒಳಗಾದ ಕೆಲವರಿಗೆ ಕೊಠಡಿಯ ಕೆಲ ಭಾಗಗಳಲ್ಲಿ ಭಾರೀ ಸದ್ದು ಕೇಳಿಬಂದಿದೆ, ಇನ್ನು ಕೆಲವರಿಗೆ ಏನೋ ಅಪ್ಪಳಿಸಿದ ಅನು‘ವ ಆಗಿದೆ, ಇನ್ನು ಕೆಲವರಿಗೆ ಯಾವುದೇ ಅನುಭವ ಆಗದೇ ಇದ್ದರೂ, ಅವರೂ ವಿಚಿತ್ರ ಸಮಸ್ಯೆಗಳಿಗೆ ತುತ್ತಾಗಿದ್ದಾರೆ. ಹೀಗಾಗಿ ಇದು ಸೋನಿಕ್ ಅಟ್ಯಾಕ್ ಆಗಿದ್ದೇ ಆದಲ್ಲಿ ಈ ರೀತಿಯ ವೈರುದ್ಧ್ಯ ಏಕೆ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ.
