ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆ.22 ರಿಂದ ಮೂರು ದಿನಗಳ ಕಾಲ ತಮಿಳುನಾಡು ಪ್ರವಾಸ ಕೈಗೊಳ್ಳಲಿದ್ದಾರೆ. 2019 ರ ಲೋಕಸಭಾ ಚುನಾವಣೆಗೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಬಿಜೆಪಿಯನ್ನು ಪುನಶ್ಚೇತನಗೊಳಿಸಲು ಶಾ ಕಸರತ್ತು ನಡೆಸುತ್ತಿದ್ದಾರೆ.
ಚೆನ್ನೈ (ಆ.20): ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆ.22 ರಿಂದ ಮೂರು ದಿನಗಳ ಕಾಲ ತಮಿಳುನಾಡು ಪ್ರವಾಸ ಕೈಗೊಳ್ಳಲಿದ್ದಾರೆ. 2019 ರ ಲೋಕಸಭಾ ಚುನಾವಣೆಗೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಬಿಜೆಪಿಯನ್ನು ಪುನಶ್ಚೇತನಗೊಳಿಸಲು ಶಾ ಕಸರತ್ತು ನಡೆಸುತ್ತಿದ್ದಾರೆ.
ತಮಿಳುನಾಡಿನ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ವರವಾಗಲಿದೆ ಎಂದು ಹೇಳಲಾಗುತ್ತಿದೆ. ಎಐಎಡಿಎಂಕೆಯ ಎರಡು ಬಣಗಳಾದ ಓಪಿಎಸ್ ಹಾಗೂ ಈಪಿಎಸ್ ನಡುವೆ ‘ಮದುವೆ’ ಮಾತುಕತೆ ನಡೆಯುತ್ತಿದ್ದು ಅಂತಿಮವಾಗುವುದು ಬಾಕಿಯಿದೆ. ಇದು ಎಐಡಿಎಂಕೆಯ ಆಂತರಿಕ ವಿಷಯವಾಗಿದ್ದು, ನಾವಿದರಲ್ಲಿ ತಲೆ ಹಾಕುವುದಿಲ್ಲ ಎಂದು ಬಿಜೆಪಿ ಹೇ;ಳಿದೆ.
ಅಮಿತ್ ಶಾ ಭೇಟಿಗೂ ಮುನ್ನ ವಿಲೀನದ ವಿಚಾರವನ್ನು ಘೋಷಣೆ ಮಾಡುವ ಒತ್ತಡ ಎಐಎಡಿಎಂಕೆ ಮೇಲಿದೆ. ಸದ್ಯದಲ್ಲೇ ಎಐಎಡಿಎಂಕೆ ಎನ್’ಡಿಎ ಸೇರುವ ಸಾಧ್ಯತೆಯಿದ್ದು, ಅದರ ಬಗ್ಗೆ ಅಮಿತ್ ಶಾ ಜೊತೆ ಮಾತುಕತೆ ನಡೆಸಬೇಕಾಗಿದೆ. ತಮಿಳುನಾಡಿನಲ್ಲಿ ಅಮಿತ್ ಶಾ ರಾಜಕೀಯ ನಡೆಗಳು ಕುತೂಹಲ ಕೆರಳಿಸಿವೆ.
