ನವದೆಹಲಿ[ಜ.06]: ತಕ್ಷಣಕ್ಕೆ ಲೋಕಸಭಾ ಚುನಾವಣೆ ನಡೆದರೆ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಯೊಂದು ಹೇಳಿದೆ. ಮತ್ತೊಮ್ಮೆ ಅಧಿಕಾರಕ್ಕೆ ಬರುವ ಹುಮ್ಮಸ್ಸಿನಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಭವಿಷ್ಯವನ್ನು ರೈತರು ಮತ್ತು ಮಧ್ಯಮ ವರ್ಗದವರು ಈ ಬಾರಿ ನಿರ್ಧರಿಸಲಿದ್ದಾರೆ. ಅವರು ಮತಹಾಕಿದಲ್ಲಿ ಎನ್‌ಡಿಎ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ವಿಡಿಪಿ ಅಸೋಸಿಯೇಟ್ಸ್‌ ನಡೆಸಿದ ಸಮೀಕ್ಷೆ ಹೇಳಿದೆ.

ಸಮೀಕ್ಷೆ ಅನ್ವಯ ಎನ್‌ಡಿಎ ಮೈತ್ರಿಕೂಟ ಶೇ.36ರಷ್ಟುಮತಗಳಿಕೆಯೊಂದಿಗೆ 225 ಸ್ಥಾನ, ಶೇ.32ರಷ್ಟುಮತಗಳಿಕೆಯೊಂದಿಗೆ ಯುಪಿಎ ಮೈತ್ರಿಕೂಟ 167 ಸ್ಥಾನ ಹಾಗೂ ಶೇ.26ರಷ್ಟುಮತಗಳೊಂದಿಗೆ ಇತರರುರ 150 ಸ್ಥಾನ ಪಡೆಯಲಿದ್ದಾರೆ.

ಇನ್ನು ಪಕ್ಷವಾರು ಲೆಕ್ಕಾಚಾರದಲ್ಲಿ ಬಿಜೆಪಿಗೆ 81 ಸ್ಥಾನ ನಷ್ಟವಾಗಲಿದ್ದರೆ, ಕಾಂಗ್ರೆಸ್‌ಗೆ 66 ಸ್ಥಾನ ಲಾಭವಾಗಲಿದೆ.

ಬಲಾಬಲ: ಲೋಕಸಭೆಯ ಒಟ್ಟು ಬಲ 543

ಎನ್‌ಡಿಎ: 225 ಶೇ.36

ಯುಪಿಎ: 167 ಶೇ.32

ಇತರರು: 150 ಶೇ.26