ಮುಖ್ಯಮಂತ್ರಿ ಸಿದ್ರಾಮಯ್ಯ ಮತ್ತು ಅವರ ಪರಮಾಪ್ತ ಸಿಎಂ ಇಬ್ರಾಹಿಂ ನಡುವಿನ ಅಂತರ ದಿನೇ ದಿನೇ ಜಾಸ್ತಿ ಆಗುತ್ತಿದೆ. ಯೋಜನಾ ಆಯೋಗದ ಉಪಾಧ್ಯಕ್ಷರು ನೀಡಿದ್ದ ಹೇಳಿಕೆಗೆ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ. ಅತೃಪ್ತರನ್ನು ತೃಪ್ತಿಪಡಿಸಲು ಸಾಧ್ಯವಿಲ್ಲ ಎನ್ನುವ ಮೂಲಕ ನಿಮ್ಮ ದಾರಿ ನೀವು ನೊಡಿಕೊಳ್ಳಿ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ಪರಮಾಪ್ತರೆಲ್ಲ ಒಬ್ಬೊಬ್ಬರೇ ದೂರ ಆಗುತ್ತಿದ್ದಾರೆ. ಪರಮಾಪ್ತರ ತಂಡದಲ್ಲಿದ್ದ ಕೇಂದ್ರದ ಮಾಜಿ ಸಚಿವ ಸಿಎಂ ಇಬ್ರಾಹಿಂ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯ ನಡುವಿನ ಅಂತರ ಮತ್ತಷ್ಟು ಜಾಸ್ತಿಯಾಗಿದೆ. ಇಬ್ಬರೂ ನಾಯಕರು ನೇರವಾಗಿ ಹೇಳಿಕೆಗಳನ್ನು ನೀಡಿ ತಮ್ಮ ನಡುವೆ ಎಲ್ಲವೂ ಚೆನ್ನಾಗಿಲ್ಲ ಅಂತ ಬಹಿರಂಗ ಪಡಿಸಿದ್ದಾರೆ.

ಮೈಸೂರು(ಅ.23): ಮುಖ್ಯಮಂತ್ರಿ ಸಿದ್ರಾಮಯ್ಯ ಮತ್ತು ಅವರ ಪರಮಾಪ್ತ ಸಿಎಂ ಇಬ್ರಾಹಿಂ ನಡುವಿನ ಅಂತರ ದಿನೇ ದಿನೇ ಜಾಸ್ತಿ ಆಗುತ್ತಿದೆ. ಯೋಜನಾ ಆಯೋಗದ ಉಪಾಧ್ಯಕ್ಷರು ನೀಡಿದ್ದ ಹೇಳಿಕೆಗೆ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ. ಅತೃಪ್ತರನ್ನು ತೃಪ್ತಿಪಡಿಸಲು ಸಾಧ್ಯವಿಲ್ಲ ಎನ್ನುವ ಮೂಲಕ ನಿಮ್ಮ ದಾರಿ ನೀವು ನೊಡಿಕೊಳ್ಳಿ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ಪರಮಾಪ್ತರೆಲ್ಲ ಒಬ್ಬೊಬ್ಬರೇ ದೂರ ಆಗುತ್ತಿದ್ದಾರೆ. ಪರಮಾಪ್ತರ ತಂಡದಲ್ಲಿದ್ದ ಕೇಂದ್ರದ ಮಾಜಿ ಸಚಿವ ಸಿಎಂ ಇಬ್ರಾಹಿಂ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯ ನಡುವಿನ ಅಂತರ ಮತ್ತಷ್ಟು ಜಾಸ್ತಿಯಾಗಿದೆ. ಇಬ್ಬರೂ ನಾಯಕರು ನೇರವಾಗಿ ಹೇಳಿಕೆಗಳನ್ನು ನೀಡಿ ತಮ್ಮ ನಡುವೆ ಎಲ್ಲವೂ ಚೆನ್ನಾಗಿಲ್ಲ ಅಂತ ಬಹಿರಂಗ ಪಡಿಸಿದ್ದಾರೆ.

ಇಬ್ರಾಹಿಂ ಮುನಿಸಿಗೆ ಕಾರಣ?

ಅಹಿಂದ ಸಂಘಟನೆ ಕಟ್ಟಿಕೊಂಡು ಸಿದ್ಧರಾಮಯ್ಯ ಜಾತ್ಯತೀತ ಜನತಾದಳದಿಂದ ಬೇರೆ ಆದಾಗ ಸಿಎಂ ಇಬ್ರಾಹಿಂ ಕೂಡ ಹೊರ ಬಂದರು. ದೇವೇಗೌಡರ ಜೊತೆಗೆ ಉತ್ತಮ ಸಂಬಂಧವಿದ್ದರೂ ಸಿದ್ಧರಾಮಯ್ಯಗೆ ಅನ್ಯಾಯ ಆಗಿದೆ ಎನ್ನುವ ನೋವಿತ್ತು. ಅಲ್ಲದೇ ದೇವೇಗೌಡರ ವಿರುದ್ಧ ನಿಂತು ಅಲ್ಪಸಂಖ್ಯಾತರನ್ನು ಸಿದ್ದರಾಮಯ್ಯ ಜೊತೆಗೆ ಬರುವಂತೆ ಮಾಡುವಲ್ಲಿ ಇಬ್ರಾಹಿಂ ಪ್ರಮುಖ ಪಾತ್ರ ವಹಿಸಿದ್ದರು. ಸಿದ್ಧರಾಮಯ್ಯ ಸಿಎಂ ಆದ ಮೇಲೆ ಸಂಪುಟ ದರ್ಜೆ ಸ್ಥಾನಮಾನ ಎನ್ನುವ ವಿಶ್ವಾಸದಲ್ಲಿದ್ದ ಇಬ್ರಾಹಿಂಗೆ ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನ ಕೊಡಲಾಯಿತು. ಅಲ್ಲದೇ ಕಾಂಗ್ರೆಸ್​ ಸೇರುವಾಗ ಜೊತೆಗಿದ್ದವರನ್ನು ದೂರವಿಟ್ಟು, ಕೆಂಪಯ್ಯ, ಎಸ್.​​ಟಿ. ಸೋಮಶೇಖರ್, ಬೈರತಿ ಬಸರಾಜ್, ಮುನಿರತ್ನ ಅವರನ್ನು ಹತ್ತಿರ ಇಟ್ಟುಕೊಂಡಿದ್ದು, ಮುನಿಸಿಗೆ ಕಾರಣವಾಯಿತು. ಅದೇ ಕಾರಣಕ್ಕೆ ಇದುವರೆಗೂ ಮನಸಿನಲ್ಲಿಯೇ ನೋವನ್ನು ಇಟ್ಟುಕೊಂಡಿದ್ದ ಇಬ್ರಾಹಿಂ, ಮುಖ್ಯಮಂತ್ರಿಗಳ ವಿರುದ್ದ ನೇರ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ, ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಹೊಗಳಿಕೆಯ ಮಾತನ್ನೂ ಆಡಿದ್ದರು.

ಇತ್ತ ಸಿಎಂ ಸಿದ್ಧರಾಮಯ್ಯ ಹಾಗೂ ಇಬ್ರಾಹಿಂ ವಿರುದ್ಧ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಗುಡುಗಿದ್ದಾರೆ. ದೇವೇಗೌಡರ ಜೊತೆ ಸೇರಿಕೊಂಡು ಕಾಂಗ್ರೆಸ್ ಮುಳುಗಿಸಲು ಇವರೆಲ್ಲ ಪ್ರಯತ್ನ ನಡೆಸಿದ್ದಾರೆ ಅಂತ ದೂರಿದ್ದಾರೆ. ಒಟ್ಟಿನಲ್ಲಿ ಸಿದ್ಧರಾಮಯ್ಯ ಹಾಗೂ ಇಬ್ರಾಹಿಂ ನಡುವಿನ ಸಂಬಂಧ ಬಹುತೇಕ ಹಳಿಸಿದೆ. ಸಿ.ಎಂ. ಇಬ್ರಾಹಿಂ ತಮ್ಮ ಹಳೆಯ ಗುರು ದೇವೇಗೌಡರ ಪಾಳಯಕ್ಕೆ ಮತ್ತೆ ನೆಗೆಯುವ ಕಾಲ ಸನ್ನಿಹಿತವಾದಂತೆ ಕಾಣುತ್ತಿದೆ.