ಗಣ್ಯರಿಂದ ವಾಜಪೇಯಿ ಅಂತಿಮ ದರ್ಶನ! ಬಿಜೆಪಿ ಕಚೇರಿಯತ್ತ ವಾಜಪೇಯಿ ಪ್ರಾರ್ಥೀವ ಶರೀರ! ತೆರೆದ ವಾಹನದಲ್ಲಿ ವಾಜಪೇಯಿ ಪ್ರಾರ್ಥೀವ ಶರೀರ! ಸಾರ್ವಜನಿಕ ದರ್ಶನಕ್ಕೆ ಬಿಜೆಪಿ ಕಚೇರಿಗೆ ರವಾನೆ
ನವದೆಹಲಿ(ಆ.17): ತೀವ್ರ ಅನಾರೋಗ್ಯದ ಕಾರಣದಿಂದ ನಿನ್ನೆ ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರಾರ್ಥೀವ ಶರೀರವನ್ನು ಮನೆಯಿಂದ ಬಿಜೆಪಿ ಕಚೇರಿಗೆ ಕೊಂಡೊಯ್ಯಲಾಗುತ್ತಿದೆ.
ಈಗಾಗಲೇ ಗಣ್ಯರು ವಾಜಪೇಯಿ ಅಂತಿಮ ದರ್ಶನ ಪಡೆದಿದ್ದು, ಪ್ರಾರ್ಥೀವ ಶರೀರವನ್ನು ಸಾವರ್ವಜನಿಕ ದರ್ಶನಕ್ಕೆ ಬಿಜೆಪಿ ಕಚೇರಿಗೆ ಕೊಂಡೊಯ್ಯಲಾಗುತ್ತಿದೆ.
ವಾಜಪೇಯಿ ಮನೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಅನೇಕ ಗಣ್ಯರು ಅಂತಿಮ ದರ್ಶನ ಪಡೆದಿದ್ದಾರೆ.
ತೆರೆದ ವಾಹನದಲ್ಲಿ ವಾಜಪೇಯಿ ಪ್ರಾರ್ಥೀವ ಶರೀರವನ್ನು ತೆಗೆದುಕೊಂಡು ಹೋಗಲಾಗುತ್ತಿದ್ದು, ಭಾರೀ ಬಂದೋಬಸ್ತ್ ಕಲ್ಪಿಸಲಾಗಿದೆ.
