ಕಿಸ್ಸೆಂಜರ್ ಎಂಬ ಹೆಸರಿನ ಈ ಸಾಧನವು ಒತ್ತಡದ ಸೆನ್ಸರ್ ಮೂಲಕ ಕಾರ್ಯನಿರ್ವಹಿಸುತ್ತದೆ.

ದೂರದಲ್ಲಿರುವ ನಿಮ್ಮ ಪ್ರೀತಿಪಾತ್ರರಿಗೆ ಮುತ್ತೊಂದನ್ನು ಕೊಡಬೇಕೆಂದು ಬಹಳಷ್ಟು ಬಾರಿ ಅನಿಸಿರಬಹುದು. ಆ ಕನಸನ್ನು ನನಸು ಮಾಡಲು ಹೊಸ ಸ್ಮಾರ್ಟ್‌ಫೋನ್ ಗ್ಯಾಡ್ಜೆಟ್‌'ವೊಂದನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಕಿಸ್ಸೆಂಜರ್ ಎಂಬ ಹೆಸರಿನ ಈ ಸಾಧನವು ಒತ್ತಡದ ಸೆನ್ಸರ್ ಮೂಲಕ ಕಾರ್ಯನಿರ್ವಹಿಸುತ್ತದೆ.

ಇದು ಬಳಕೆದಾರ ನೀಡಿದ ಮುತ್ತನ್ನು ರೆಕಾರ್ಡ್ ಮಾಡಿ, ಸ್ವೀಕಾರ ಸಾಧನವೊಂದಕ್ಕೆ ರವಾನಿಸುತ್ತದೆ. ಆ ಸಾಧನವು ಚುಂಬನವನ್ನು ಮರುಸೃಷ್ಟಿಸಿ, ಆ್ಯಪ್‌'ವೊಂದರ ಮೂಲಕ ತಲುಪಬೇಕಾದ ವ್ಯಕ್ತಿಗೆ ತಲುಪಿಸುತ್ತದೆ ಎಂದು ಲಂಡನ್‌ನ' ಸಿಟಿ ವಿವಿ ಸಂಶೋಧಕರು ತಿಳಿಸಿದ್ದಾರೆ.