ನವದೆಹಲಿ[ಜೂ.12]: ಕೇಂದ್ರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆ ಸಚಿವ ಥಾವರ್‌ಚಂದ್‌ ಗೆಹ್ಲೋಟ್‌ ಅವರನ್ನು ರಾಜ್ಯಸಭೆಯ ಬಿಜೆಪಿ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.

ಕೇಂದ್ರದ ಮಾಜಿ ಸಚಿವ ಅರುಣ್‌ ಜೇಟ್ಲಿ ಅವರು ಈ ಹಿಂದಿನ ಸರ್ಕಾರದಲ್ಲಿ ರಾಜ್ಯಸಭೆಯ ಬಿಜೆಪಿ ನಾಯಕರಾಗಿದ್ದರು. ಆದರೆ ಸದ್ಯ ಜೇಟ್ಲಿ ಅನಾರೋಗ್ಯದಿಂದ ಬಳಲಿ, ಚೇತರಿಸಿಕೊಳ್ಳುತ್ತಿರುವ ಕಾರಣ, ಜೇಟ್ಲಿ ಅವರ ಸ್ಥಾನವನ್ನು ಗೆಹ್ಲೋಟ್‌ಗೆ ವಹಿಸಲಾಗಿದೆ.

ಮಧ್ಯಪ್ರದೇಶ ಮೂಲದ ಉತ್ತಮ ಸಂಸದೀಯ ಪಟುವಾಗಿರುವ ಗೆಹ್ಲೋಟ್‌ ಅವರು, ದಲಿತ ವರ್ಗದ ಬಿಜೆಪಿಯ ಪ್ರಬಲ ನಾಯಕರಾಗಿದ್ದಾರೆ.