Asianet Suvarna News Asianet Suvarna News

ಥಾಯ್ ಬಾಲಕರು ಗುಹೆಯಲ್ಲಿದ್ದಾಗ ಹೆದರಂತೆ ತಡೆಯಲು ನೀಡಿದ್ದೇನು..?

ಗುಹೆಯಲ್ಲಿ ವಾರಗಟ್ಟಲೇ ಸಿಕ್ಕಿಹಾಕಿಕೊಂಡಿದ್ದ ಬಾಲಕರು ಅಪಾಯಕಾರಿ ನೀರಿನಾಳದ ರಕ್ಷಣೆಯ ವೇಳೆ ಆತಂಕಕ್ಕೆ ಒಳಗಾಗುವುದನ್ನು ತಡೆಯಲು ಕುದುರೆಗಳನ್ನು ನಿಸ್ತೇಜಗೊಳಿಸಲು ನೀಡಲಾಗುವ ಮಾದಕದ್ರವ್ಯವನ್ನು ನೀಡಲಾಗಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ. 

Thai cave rescue The drug that allowed boys to survive rescue
Author
Bengaluru, First Published Jul 13, 2018, 11:35 AM IST

ಮಾ ಸಾಯ್‌ (ಥಾಯ್ಲೆಂಡ್‌): ಗುಹೆಯಲ್ಲಿ ವಾರಗಟ್ಟಲೇ ಸಿಕ್ಕಿಹಾಕಿಕೊಂಡಿದ್ದ ಬಾಲಕರು ಅಪಾಯಕಾರಿ ನೀರಿನಾಳದ ರಕ್ಷಣೆಯ ವೇಳೆ ಆತಂಕಕ್ಕೆ ಒಳಗಾಗುವುದನ್ನು ತಡೆಯಲು ಕುದುರೆಗಳನ್ನು ನಿಸ್ತೇಜಗೊಳಿಸಲು ನೀಡಲಾಗುವ ಮಾದಕದ್ರವ್ಯವನ್ನು ನೀಡಲಾಗಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ. 

ಮಕ್ಕಳಿಗೆ ಮಾದಕದ್ರವ್ಯ ನೀಡಿದ್ದನ್ನು ಅಧಿಕಾರಿಗಳು ಆರಂಭದಲ್ಲಿ ನಿರಾಕರಿಸಿದ್ದರು. ಆದರೆ, ಬಾಲಕರಿಗೆ ಕೆಟಾಮಿನ್‌ ಎಂಬ ಆತಂಕ ನಿವಾರಣಾ ದ್ರವ್ಯವನ್ನು ನೀಡಲಾಗಿತ್ತು ಎಂದು ಥಾಯ್ಲೆಂಡ್‌ ಪ್ರಧಾನಿ ಪ್ರಾಯಟ್‌ ಚಾನ್‌ ಒ ಚಾ ಖಚಿತಪಡಿಸಿದ್ದಾರೆ. 

ಡ್ರಗ್ಸ್‌ ಸೇವಿಸಿದ್ದರಿಂದ ರಕ್ಷಣೆಯ ವೇಳೆ ಬಾಲಕರು ಪ್ರಜ್ಞಾಹೀನರಾಗಿದ್ದರು. ಅವರನ್ನು ಯಾವುದೇ ತೊಂದರೆ ಇಲ್ಲದೇ ಹೊರಗೆ ತರಲಾಯಿತು ಎಂದು ಡೈವರ್‌ಗಳು ತಿಳಿಸಿದ್ದಾರೆ.

Follow Us:
Download App:
  • android
  • ios