ಜಮ್ಮು ಕಾಶ್ಮೀರ (ಅ.15): ಜಮ್ಮು ಕಾಶ್ಮೀರದಲ್ಲಿ ಅಶಾಂತಿ ಉಂಟಾಗಲು ಭಯೋತ್ಪಾದನೆಯೇ ಮುಖ್ಯ ಕಾರಣವೆಂದು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿಕೆ ನೀಡಿದ್ದಾರೆ. ಅಲ್ಲಿನ ಪರಿಸ್ಥಿತಿ ನಿಯಂತ್ರಣವನ್ನು ಸೇನೆಗೆ ಬಿಡಲಾಗಿದೆ ಎಂದರು.

ಕಾಶ್ಮೀರ ಕಣಿವೆಯಲ್ಲಿ ತಲೆದೂರಿರುವ ಅಶಾಂತಿಗೆ ಭಯೋತ್ಪಾದನೆಯೇ ಕಾರಣ. ಉಗ್ರರು ಮುಗ್ದ ಜನರನ್ನು ಕೊಲ್ಲುವುದನ್ನು ನೋಡಿ ನೋವಾಗುತ್ತದೆ. ಜನರು ಕಾಶ್ಮೀರವನ್ನು ತೊರೆಯುವ ಆಲೋಚನೆ ಮಾಡುವುದಿಲ್ಲ. ನೆಮ್ಮದಿ ಜೀವನ ನಡೆಸಲು ಬೇರೆಡೆಗೆ ಹೋಗುತ್ತಿದ್ದಾರೆ. ಯಾವತ್ತು  ಭಯೋತ್ಪಾದನೆ ಕೊನೆಯಾಗುತ್ತೋ ಅವತ್ತು ಈ ಎಲ್ಲಾ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಪಾಸ್ವಾನ್ ಹೇಳಿದ್ದಾರೆ.