ಸ್ಫೋಟದ ಬಳಿಕ ಪರಾರಿಯಾಗಿದ್ದ ಶಂಕಿತ ಉಗ್ರ ಸುಲೇಮಾನ್ ದಾವೂದ್ ಮಧುರೈನಲ್ಲಿ ಇತ್ತೀಚೆಗಷ್ಟೇ ಸಿಕ್ಕಿಬಿದ್ದಿದ್ದ, ಇಂದು ಬೆಳಿಗ್ಗೆ ಲಕ್ಷ್ಮೀಪುರಂನಲ್ಲಿರುವ ಬಾಂಬ್ ಸ್ಫೋಟ ಪ್ರಕರಣ ತನಿಖಾಧಿಕಾರಿ, ಕೆ.ಆರ್. ವಿಭಾಗದ ಎಸಿಪಿ ಮಲ್ಲಿಕ್ ಅವರ ಕಚೇರಿಯಲ್ಲಿ ಒಂದುವರೆ ಗಂಟೆಗೂ ಹೆಚ್ಚು ಕಾಲ ತನಿಖೆ ನಡೆಸಲಾಯಿತು.
ಮೈಸೂರು (ಡಿ.01): ಕಳೆದ ಆಗಸ್ಟ್ 1ರಂದು ಮೈಸೂರಿನ ಕೋರ್ಟ್ ಆವರಣದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಬಂಧಿಸಲ್ಪಟ್ಟಿರುವ ರೋಪಿಗಳನ್ನು ಎನ್’ಐಏ ಅಧಿಕಾರಿಗಳು ಹೆಚ್ಚಿನ ತನಿಖೆಗೆ ಮೈಸೂರಿಗೆ ಕರೆತಂದಿದ್ದಾರೆ.
ಸ್ಫೋಟದ ಬಳಿಕ ಪರಾರಿಯಾಗಿದ್ದ ಶಂಕಿತ ಉಗ್ರ ಸುಲೇಮಾನ್ ದಾವೂದ್ ಮಧುರೈನಲ್ಲಿ ಇತ್ತೀಚೆಗಷ್ಟೇ ಸಿಕ್ಕಿಬಿದ್ದಿದ್ದ, ಇಂದು ಬೆಳಿಗ್ಗೆ ಲಕ್ಷ್ಮೀಪುರಂನಲ್ಲಿರುವ ಬಾಂಬ್ ಸ್ಫೋಟ ಪ್ರಕರಣ ತನಿಖಾಧಿಕಾರಿ, ಕೆ.ಆರ್. ವಿಭಾಗದ ಎಸಿಪಿ ಮಲ್ಲಿಕ್ ಅವರ ಕಚೇರಿಯಲ್ಲಿ ಒಂದುವರೆ ಗಂಟೆಗೂ ಹೆಚ್ಚು ಕಾಲ ತನಿಖೆ ನಡೆಸಲಾಯಿತು.
ಬಳಿಕ ಮೈಸೂರಿನಲ್ಲಿ ಆತ ಭೇಟಿ ನೀಡಿದ್ದ ಎಲ್ಲಾ ಸ್ಥಳಗಳಿಗೂ ಕರೆದೊಯ್ದು ಎನ್ಐಎ ತಂಡ ಮಾಹಿತಿ ಕಲೆಹಾಕುತ್ತಿದೆ. ನ.28ರಂದು ಮಧುರೈನಲ್ಲಿ ಸಿಕ್ಕಿಬಿದ್ದ ಐವರು ಶಂಕಿತ ಉಗ್ರರ ಪೈಕಿ ಸುಲೇಮಾನ್ ದಾವೂದ್ ಮೈಸೂರಿನ ಕೋರ್ಟ್ನಲ್ಲಿ ಬಾಂಬ್ ಇರಿಸಿದ್ದ ಎಂದು ಪ್ರಾಥಮಿಕ ತಿಳಿದುಬಂದಿತ್ತು.