ನವದೆಹಲಿ (ಅ.03): ಜಮ್ಮು ಮತ್ತು ಕಾಶ್ಮೀರದ ಬರಾಮುಲ್ಲದಲ್ಲಿ ಭಾರತೀಯ ಗಡಿ ಭದ್ರತಾ ಪಡೆಯ ಮೇಲೆ ನಡೆದಿರುವ ದಾಳಿಯನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಖಂಡಿಸಿದ್ದಾರೆ.

ನಮ್ಮ ಸೈನಿಕರ ಕೆಚ್ಚೆದೆ ಹಾಗೂ ಸಾಹಸದ ಮುಂದೆ ಉಗ್ರರ ಅಟ್ಟಹಾಸ ನಡೆಯದು ಎಂದು ರಾಹುಲ್ ಗುಡುಗಿದ್ದಾರೆ.

ತಮ್ಮ ಪ್ರಾಣವನ್ನು ಬಲಿಕೊಟ್ಟು ನಮ್ಮ ದೇಶವನ್ನು ಕಾಯುತ್ತಿರುವ ನಮ್ಮ ಸೈನಿಕರಿಗಾಗಿ ನಾನು ಪ್ರಾರ್ಥಿಸುತ್ತೇನೆ. ಅವರಿಗೊಂದು ನನ್ನ ಸಲಾಂ ಎಂದು ರಾಹುಲ್ ಹೇಳಿದ್ದಾರೆ.

ಬರಾಮುಲ್ಲ ಪ್ರದೇಶದಲ್ಲಿ ಗಡಿ ಭದ್ರತಾ ಪಡೆಯ ಮೇಲೆ ದಾಳಿ ನಡೆಸಿದ ಉಗ್ರರ ಜೊತೆ ನಮ್ಮ ಸೈನಿಕರು ಹೋರಾಡುವಾಗ ಓರ್ವ ಯೋಧ ಹುತಾತ್ಮನಾಗಿದ್ದು ಓ ಗಾಯಗೊಂಡಿದ್ದಾನೆ