ಇಲ್ಲಿನ ಮಸೀದಿಯೊಂದರ ಹೊರಗಡೆ ನಿಂತಿದ್ದ ಜನರ ಮೇಲೆ ವ್ಯಾನ್‌ವೊಂದು ಹರಿದು ಓರ್ವ ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಬ್ರಿಟನ್‌ ಪ್ರಧಾನಿ ತೆರೆಸಾ ಮೇ ಇಂದೊಂದು ಶಂಕಿತ ಭಯೋತ್ಪಾದಕ ದಾಳಿ ಎಂದು ಹೇಳಿದ್ದಾರೆ.

ಲಂಡನ್‌: ಇಲ್ಲಿನ ಮಸೀದಿಯೊಂದರ ಹೊರಗಡೆ ನಿಂತಿದ್ದ ಜನರ ಮೇಲೆ ವ್ಯಾನ್‌ವೊಂದು ಹರಿದು ಓರ್ವ ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಬ್ರಿಟನ್‌ ಪ್ರಧಾನಿ ತೆರೆಸಾ ಮೇ ಇಂದೊಂದು ಶಂಕಿತ ಭಯೋತ್ಪಾದಕ ದಾಳಿ ಎಂದು ಹೇಳಿದ್ದಾರೆ.

ಭಾನುವಾರ ಮಧ್ಯರಾತ್ರಿಯ ವೇಳೆಯಲ್ಲಿ ಈ ಘಟನೆ ನಡೆದಿದೆ. ವೆಲ್‌ಫೇರ್‌ ಹೌಸ್‌ನಲ್ಲಿರುವ ಮಸೀದಿಯಲ್ಲಿ ರಂಜಾನ್‌ ಪ್ರಾರ್ಥನೆಗೆಂದು ಆಗಮಿಸಿದ್ದವರ ಮೇಲೆ ಚಾಲಕ ವ್ಯಾನ್‌ ನುಗ್ಗಿಸಿದ್ದಾನೆ.

ಈ ವೇಳೆ ಸಿಟ್ಟಿಗೆದ್ದ ಜನರು ಚಾಲಕನನನ್ನು ಹಿಡಿದು ಹಲ್ಲೆ ನಡೆಸಲು ಯತ್ನಿಸಿದ್ದು, ಮಸೀದಿಯ ಮೌಲ್ವಿಯೊಬ್ಬರು ದಾಳಿಕೋರ ಚಾಲಕನಿಗೆ ರಕ್ಷಣೆ ನೀಡಿ ಆತನ ಪ್ರಾಣ ಉಳಿಸಿದ್ದಾರೆ. ಬಳಿಕ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.