ನವದೆಹಲಿ: ಭೀಕರ ಸ್ಫೋಟ ಘಟನೆ ಹಿನ್ನೆಲೆಯಲ್ಲಿ ಏ.24ರವರೆಗೆ ಕೊಲಂಬೋಕ್ಕೆ ಹೋಗುವ ಮತ್ತು ಬರುವ ಎಲ್ಲ ಮಾರ್ಗದ ವಿಮಾನ ಸಂಚಾರ ಹಾಗೂ ಟಿಕೆಟ್‌ಗಳನ್ನು ಏರ್‌ ಇಂಡಿಯಾ ರದ್ದುಗೊಳಿಸಿದೆ. 

ಈ ಕುರಿತು ಏರ್‌ಇಂಡಿಯಾ ಟ್ವೀಟ್‌ ಮಾಡಿದೆ. ದೆಹಲಿಯಿಂದ ಕೊಲಂಬೋಕ್ಕೆ ದಿನಂಪ್ರತಿ ಎರಡು ಮತ್ತು ಚೆನೈನಿಂದ ಒಂದು ವಿಮಾನ ಸಂಚರಿಸುತ್ತಿದ್ದು, ಕೊಲಂಬೋ ದುರ್ಘಟನೆ ಹಿನ್ನೆಲೆಯಲ್ಲಿ ಎಲ್ಲವನ್ನೂ ರದ್ದುಗೊಳಿಸಿದೆ.

ಈಸ್ಟರ್ ಭಾನುವಾರದ ಪ್ರಾರ್ಥನೆಯಲ್ಲಿ ಸುಮಾರು ಒಂದು ಸಾವಿರ ಕ್ರೈಸ್ತರು ತೊಡಗಿದ್ದಾಗಲೇ ಲಂಕಾದ ಪಶ್ಚಿಮ ಕರಾವಳಿಯ ಪಟ್ಟಣ ನೆಗೊಂಬೋದ ಚರ್ಚ್‌ನಲ್ಲಿ ಸ್ಫೋಟ ಸಂಭವಿಸಿ ನೆತ್ತರು ಹರಿದಿದ್ದು, ಈ ದಾಳಿಯಲ್ಲಿ 300 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.