ಮಾಡೆಲ್'ಗಳು ಹಾಗೂ ನಟ, ನಟಿಯರು ಕ್ಯಾಟ್ ವಾಕ್ ಮಾಡುವಂತಹ ಸಂದರ್ಭದಲ್ಲಿ ಬಿದ್ದು ಹಾಗೂ ಬಟ್ಟೆ ಜಾರಿ ಮುಜುಗರಕ್ಕೀಡಾದ ಸುದ್ದಿಗಳನ್ನು ಕೇಳುತ್ತಿರುತ್ತೇವೆ. ಆದರೆ ಈ ಬಾರಿ ಅಂತಹ ಮುಜುಗರದ ಸನ್ನಿವೇಶ ಎದುರಿಸಿದ್ದು ಬಾಲಿವುಡ್'ನ ಖ್ಯಾತ ಕೊರಿಯೋಗ್ರಾಫರ್ ಟೆರೆನ್ಸ್ ಲೂವಿಸ್. ಹಿಂದಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ 'ನಚ್ ಬಲಿಯೇ ಸೀಜನ್ 8'ರಲ್ಲಿ ತೀರ್ಪುಗಾರರಾಗಿರುವ ಟೆರೆನ್ಸ್ ವೇದಿಕೆಯಲ್ಲಿ ನೃತ್ಯ ಮಾಡುತ್ತಿದ್ದ ವೇಳೆ ಇವರ ಪ್ಯಾಂಟ್ ಹರಿದಿದ್ದು, ಈ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿದೆ.  

ಮುಂಬೈ(ಮೇ.27): ಮಾಡೆಲ್'ಗಳು ಹಾಗೂ ನಟ, ನಟಿಯರು ಕ್ಯಾಟ್ ವಾಕ್ ಮಾಡುವಂತಹ ಸಂದರ್ಭದಲ್ಲಿ ಬಿದ್ದು ಹಾಗೂ ಬಟ್ಟೆ ಜಾರಿ ಮುಜುಗರಕ್ಕೀಡಾದ ಸುದ್ದಿಗಳನ್ನು ಕೇಳುತ್ತಿರುತ್ತೇವೆ. ಆದರೆ ಈ ಬಾರಿ ಅಂತಹ ಮುಜುಗರದ ಸನ್ನಿವೇಶ ಎದುರಿಸಿದ್ದು ಬಾಲಿವುಡ್'ನ ಖ್ಯಾತ ಕೊರಿಯೋಗ್ರಾಫರ್ ಟೆರೆನ್ಸ್ ಲೂವಿಸ್. ಹಿಂದಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ 'ನಚ್ ಬಲಿಯೇ ಸೀಜನ್ 8'ರಲ್ಲಿ ತೀರ್ಪುಗಾರರಾಗಿರುವ ಟೆರೆನ್ಸ್ ವೇದಿಕೆಯಲ್ಲಿ ನೃತ್ಯ ಮಾಡುತ್ತಿದ್ದ ವೇಳೆ ಇವರ ಪ್ಯಾಂಟ್ ಹರಿದಿದ್ದು, ಈ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿದೆ.

ಕಳೆದ ಎಪಿಸೋಡ್'ನಲ್ಲಿ ಈ ರಿಯಾಲಿಟಿ ಶೋನಲ್ಲಿ ಅತಿಥಿಯಾಗಿ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ಆಗಮಿಸಿದ್ದರು. ಈ ಸಂದರ್ಭದಲ್ಲಿ ಶೋನಲ್ಲಿ ಭಾಗವಹಿಸಿದ ಸ್ಪರ್ಧಿಗಳು ಟೆರೆನ್ಸ್ ಬಳಿ ಡಾನ್ಸ್ ಮಾಡಲು ಮನವಿ ಮಾಡಿಕೊಂಡಿದ್ದಾರೆ. ಇವರ ಬೇಡಿಕೆಯ ಮೇರೆಗೆ ತೀರ್ಪುಗಾರ ಟೆರೆನ್ಸ್ ವೇದಿಕೆ ಏರಿದ್ದಾರೆ. ಡಾನ್ಸ್ ಆರಂಭಿಸಿದ ಇವರು 180 ಡಿಗ್ರಿಯಲ್ಲಿ ತಿರುಗುವ ಮೂಲಕ ಮೊದಲ ಸ್ಟೆಪ್ ಮಾಡಿದ್ದು, ಇದೇ ಸಂದರ್ಭದಲ್ಲಿ ಅವರ ಪ್ಯಾಂಟ್ ಮಧ್ಯ ಭಾಗದಲ್ಲೇ ಹರಿದಿದೆ. ಆದರೆ ಇದನ್ನರಿಯದ ಟೆರೆನ್ಸ್ ಡಾನ್ಸ್ ಮಾಡುವುದರಲ್ಲೇ ತಲ್ಲೀನರಾಗಿದ್ದಾರೆ ಹೀಗಾಗಿ ಇವರ ಪ್ಯಾಂಟ್ ಮತ್ತಷ್ಟು ಹರಿದಿದೆ.

ಈ ಮಧ್ಯೆ ಪ್ರೇಕ್ಷಕರ ಮುಖಭಾವ ಅರಿತ ಟೆರೆನ್ಸ್ ತನ್ನ ಪ್ಯಾಂಟ್ ಕಡೆ ದೃಷ್ಟಿ ಹಾಯಿಸಿದಾಗ ನಿಜ ವಿಚಾರ ತಿಳಿದಿದೆ. ಅಷ್ಟರಲ್ಲಾಗಲೇ ಸ್ಪರ್ಧಿಗಳು ಅವರಿಗೆ ಬಟ್ಟೆ ನೀಡಿದ್ದಾರೆ. ಇಂತಹ ಮುಜುಗರ ತರಿಸುವ ಸಂದರ್ಭ ಎದುರಾದರೂ ಜಾಣತನದಿಂದ ಜನರೆಡೆ ನಗು ಬೀರುತ್ತಾ ಟೆರೆನ್ಸ್ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ.