Asianet Suvarna News Asianet Suvarna News

ತೂತ್ತುಕುಡಿ ಚರ್ಚ್ ವಿದ್ರೋಹಿ ಚಟುವಟಿಕೆಗಳಿಗೆ ಬಳಕೆಯಾಗಿತ್ತೇ..?

‘ತಮಿಳುನಾಡಿನ ತೂತ್ತುಕಡಿಯ ತಾಮ್ರ ಘಟಕ ಮುಚ್ಚುವಂತೆ ನಡೆದ ಗಲಭೆ ಬಳಿಕ ಪೊಲೀಸರು ಇಲ್ಲಿನ ಚರ್ಚ್ ಮೇಲೆ ದಾಳಿ ನಡೆಸಿದ್ದು ಚರ್ಚ್, ಪೆಟ್ರೋಲ್ ಬಾಂಬ್ ಸಿದ್ಧಪಡಿಸುವ ಮತ್ತು ಗಲಭೆಕೋರರನ್ನು ಸೃಷ್ಟಿಸುವ ತಾಣವಾಗಿದೆ ಎಂಬುದು ದಾಳಿ ವೇಳೆ ಬಯಲಾಗಿದೆ. ಯಾವುದೇ ಮುಖ್ಯವಾಹಿನಿಗಳು ಈ ಬಗ್ಗೆ ವರದಿ ಮಾಡಿಲ್ಲ. ಧಾರ್ಮಿಕ ಪವಿತ್ರ ಸ್ಥಳವನ್ನು ಸಮಾಜ ವಿರೋಧಿ ಚಟುವಟಿಕೆಗೆ ಬಳಸಿಕೊಳ್ಳಲಾಗುತ್ತಿದೆ’ ಎಂದು ಹೇಳಲಾದ ಸಂದೇಶದೊಂದಿಗೆ ಪೊಲೀಸರು ಚರ್ಚ್ ಒಳಗೆ ಜನರನ್ನು ಥಳಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. 

Ten year old video circulates as raid on TN church involved in Tuticorin riots

ಬೆಂಗಳೂರು[ಮೇ.31]: ‘ತಮಿಳುನಾಡಿನ ತೂತ್ತುಕಡಿಯ ತಾಮ್ರ ಘಟಕ ಮುಚ್ಚುವಂತೆ ನಡೆದ ಗಲಭೆ ಬಳಿಕ ಪೊಲೀಸರು ಇಲ್ಲಿನ ಚರ್ಚ್ ಮೇಲೆ ದಾಳಿ ನಡೆಸಿದ್ದು ಚರ್ಚ್, ಪೆಟ್ರೋಲ್ ಬಾಂಬ್ ಸಿದ್ಧಪಡಿಸುವ ಮತ್ತು ಗಲಭೆಕೋರರನ್ನು ಸೃಷ್ಟಿಸುವ ತಾಣವಾಗಿದೆ ಎಂಬುದು ದಾಳಿ ವೇಳೆ ಬಯಲಾಗಿದೆ. ಯಾವುದೇ ಮುಖ್ಯವಾಹಿನಿಗಳು ಈ ಬಗ್ಗೆ ವರದಿ ಮಾಡಿಲ್ಲ. ಧಾರ್ಮಿಕ ಪವಿತ್ರ ಸ್ಥಳವನ್ನು ಸಮಾಜ ವಿರೋಧಿ ಚಟುವಟಿಕೆಗೆ ಬಳಸಿಕೊಳ್ಳಲಾಗುತ್ತಿದೆ’ ಎಂದು ಹೇಳಲಾದ ಸಂದೇಶದೊಂದಿಗೆ ಪೊಲೀಸರು ಚರ್ಚ್ ಒಳಗೆ ಜನರನ್ನು ಥಳಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. 
ವಿಡಿಯೋದಲ್ಲಿ ಪೊಲೀಸರು ಜನರ ಮೇಲೆ ಲಾಠಿ ಚಾರ್ಜ್ ನಡೆಸುತ್ತಿರುವ ದೃಶ್ಯವಿದೆ. ಈ ವಿಡಿಯೋ ಕಳೆದ 48 ಗಂಟೆಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಹೀಗೆ ಸಾಮಾಜಿಕ ಮಾಧ್ಯಮಗಳಲ್ಲಿ ಈ ಸಂದೇಶವನ್ನು ಶೇರ್ ಮಾಡಿರುವವರು ತಮ್ಮನ್ನು ‘ಹಿಂದು ರಾಷ್ಟ್ರೀಯವಾದಿಗಳು’ ಎಂದು ಕರೆದುಕೊಂಡಿದ್ದಾರೆ. ಆದರೆ ನಿಜಕ್ಕೂ ತಮಿಳುನಾಡಿನ ತೂತ್ತುಕುಡಿ ಚರ್ಚ್ ಮೇಲೆ ಪೊಲೀಸರು ದಾಳಿ ನಡೆಸಿದ್ದರೇ, ಚರ್ಚ್ ನಿಜಕ್ಕೂ ಪೆಟ್ರೋಲ್ ಬಾಂಬ್ ಮತ್ತು ಗಲಭೆಕೋರರ ತಾಣವಾಗಿತ್ತೇ ಎಂದು ‘ಆಲ್ಟ್ ನ್ಯೂಸ್’ ತನಿಖೆಗೆ ಮುಂದಾದಾಗ ಇದೊಂದು ಸುಳ್ಳು ಸುದ್ದಿ ಎಂಬುದು ಸಾಬೀತಾಗಿದೆ. 
ಇತ್ತೀಚೆಗೆ ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕವೂ ಕೂಡ ಇದೇ ವಿಡಿಯೋವನ್ನು ಪೋಸ್ಟ್ ಮಾಡಿ ‘ಆರ್‌ಎಸ್‌ಎಸ್, ಬಿಜೆಪಿ ಕಾರ್ಯಕರ್ತರು ಮಂಗಳೂರಿನ ಚರ್ಚ್ ಮೇಲೆ ದಾಳಿ ನಡೆಸಿದ್ದಾರೆ’ ಎನ್ನಲಾಗಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಟಿಸಿರುವ ಈ ದೃಶ ವಾಸ್ತವವಾಗಿ ಕರ್ನಾಟಕದ್ದು, 2008 ಸೆ.15ರಲ್ಲಿ ಮಂಗಳೂರಿನ ಸೇಂಟ್ ಸೆಬಾಸ್ಟಿಯನ್ ಚರ್ಚ್‌ನಲ್ಲಿ ನಡೆದ ಘಟನೆಯೊಂದರ ವಿಡಿಯೋ ಇದಾಗಿದ್ದು, ‘ಅಲ್ ಜಜೀರಾ’ ಇದನ್ನು ವರದಿ ಮಾಡಿತ್ತು.

Follow Us:
Download App:
  • android
  • ios