ನವದೆಹಲಿ [ಜು.2] : ಇಲ್ಲಿನ ಹಜ್ ಕ್ವಾಜಿ  ಪ್ರದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪಾರ್ಕಿಂಗ್ ಜಾಗಕ್ಕಾಗಿ ದೇವಾಲಯವನ್ನು ಉರುಳಿಸಿದ್ದು, ಈ ನಿಟ್ಟಿನಲ್ಲಿ ಎರಡು ಕೋಮಿನ ನಡುವೆ ಗಲಭೆ ನಡೆದಿದೆ. 

ಹಜ್ ಕ್ವಾಜಿ ಪ್ರದೇಶದಲ್ಲಿ ತೀವ್ರ ಗಲಭೆಯಿಂದ ಅಶಾಂತಿ ವಾತಾವರಣ ನಿರ್ಮಾಣವಾಗಿದೆ. ಜನರು ಶಾಂತಿ ಕಾಪಾಡಿ. ಇಲ್ಲಿನ ಸಮಸ್ಯೆ ನಿವಾರಣೆ ಶೀಘ್ರ ಕ್ರಮ ವಹಿಸಲಾಗುವುದು ಎಂದು ಇಲ್ಲಿನ ಡಿಸಿಪಿ  ಮನ್ ದೀಪ್ ಸಿಂಗ್ ಜನರಲ್ಲಿ ಮನವಿ ಮಾಡಿದ್ದಾರೆ. 

 

ದೇವಾಲಯ ಉರುಳಿಸಿರುವುದು ಎರಡು ಕೋಮಿನ ನಡುವಿನ ಸಂಘರ್ಷಕ್ಕೆ ಪ್ರಮುಖ ಕಾರಣವಾಗಿದೆ. 

ಪರಸ್ಪರ ಎರಡು  ಕೋಮಿನ ನಡುವೆ ಗಲಭೆ ನಡೆದಿದ್ದು, ಪರಸ್ಪರ ಬಡಿದಾಡಿಕೊಂಡಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಅತ್ಯಧಿಕ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿದೆ.