ಕೆಸಿಆರ್​​ ಸಾಹೇಬ್ರು ಬಳಸುವ ಬಾತ್‍ರೂಂಗೂ, ಟಾಯ್ಲೆಟ್‍ಗೂ ಬುಲೆಟ್ ಪ್ರೂಫ್ ಗ್ಲಾಸ್ ಅಳವಡಿಸಿದ್ದಾರೆ. 

ತೆಲಂಗಾಣ(ನ.24): ಹೊಸ ರಾಜ್ಯ ಉದ್ಭವ ಆದಮೇಲೆ ತೆಲಂಗಾಣವನ್ನ ಅಭಿವೃದ್ಧಿ ಮಾಡೋ ಕನಸು ಕಾಣುತ್ತಿರುವ ಮುಖ್ಯಮಂತ್ರಿ ಕೆಸಿಆರ್ ಅವರ ಮೋಜಿನ ಬದುಕು ಮಾತ್ರ ಸಿಕ್ಕಾಪಟ್ಟೆ ದುಬಾರಿಯಾಗಿದೆ.

ಎಷ್ಟರಮಟ್ಟಿಗೆ ಅಂದ್ರೆ 9 ಎಕರೆಯಲ್ಲಿ ಭವ್ಯ ಬಂಗ್ಲೆಯನ್ನು ಕಟ್ಟಿಸಿಕೊಂಡಿದ್ದಾರೆ. ಈ ಬಂಗ್ಲೆಯ ಸುತ್ತಲೂ ಬುಲೆಟ್ ಪ್ರೂಫ್ ಗ್ಲಾಸ್ ಹಾಕಿಸಿಕೊಂಡಿದ್ದಾರೆ. ಜನರಿಗಿದ್ದ ರಸ್ತೆಯನ್ನೇ ಬಂದ್ ಮಾಡಿಸಿ ಸ್ವಂತಕ್ಕೆ ಬಳಸಿಕೊಂಡಿದ್ದಾರೆ.

ಇದೆಲ್ಲಾ ಓಕೆ. ಆದ್ರೆ ಕೆಸಿಆರ್​​ ಸಾಹೇಬ್ರು ಬಳಸುವ ಬಾತ್‍ರೂಂಗೂ, ಟಾಯ್ಲೆಟ್‍ಗೂ ಬುಲೆಟ್ ಪ್ರೂಫ್ ಗ್ಲಾಸ್ ಅಳವಡಿಸಿದ್ದಾರೆ. 

ಕೆಸಿಆರ್ ಇತ್ತೀಚೆಗಷ್ಟೇ ಬುಲೆಟ್ ಪ್ರೂಫ್ ಬಸ್ ಖರೀದಿ ವಿವಾದದ ಬೆನ್ನಲ್ಲೇ ಬಂಗ್ಲೆಯ ಟಾಯ್ಲೆಟ್‍ಗೂ ಬುಲೆಟ್ ಪ್ರೂಫ್ ಗ್ಲಾಸ್ ಹಾಕ್ಸಿ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಕೆಸಿಆರ್ ಅವರ ಭವ್ಯ ಭಂಗಲೆಯ ಗೃಹಪ್ರವೇಶ ಇಂದು ನಡೆದಿದೆ.