ನವದೆಹಲಿ(ಜು.10): ಕರ್ನಾಟಕದಲ್ಲೂ ಅಕ್ರಮ ವಲಸಿಗ ಬಾಂಗ್ಲಾದೇಶಿಯರಿದ್ದು, ಅವರನ್ನು ಗುರುತಿಸಲು NRCಯನ್ನು ರಾಜ್ಯದಲ್ಲೂ ವಿಸ್ತರಿಸುವಂತೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.

ಲೋಕಸಭೆಯಲ್ಲಿ ಇಂದು ಶೂನ್ಯ ವೇಳೆಯಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿದ್ದು, ಇದರಿಂದ ರಾಜ್ಯದ ಭದ್ರತೆಗೆ ಧಕ್ಕೆ ಇದೆ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ NRCಯನ್ನು ರಾಜ್ಯಕ್ಕೂ ವಿಸ್ತರಿಸಿ ಅಕ್ರಮ ಬಾಂಗ್ಲಾ ವಲಸಿಗರನ್ನು ಗುರುತಿಸಬೇಕಿದೆ ಎಂದು ತೇಜಸ್ವಿ ಆಗ್ರಹಿಸಿದರು.

ಅಕ್ರಮ ಬಾಂಗ್ಲಾ ವಲಸಿಗರು ಸ್ಥಳೀಯರಿಂದ ಕೆಲಸ ಕಸಿದುಕೊಳ್ಳುತ್ತಿದ್ದು, ಇದರಿಂದ ರಾಜ್ಯಕ್ಕೆ ಆರ್ಥಿಕ ನಷ್ಟವೂ ಉಂಟಾಗುತ್ತಿದೆ ಎಂದು ತೇಜಸ್ವಿ ಅಭಿಪ್ರಾಯಪಟ್ಟಿದ್ದಾರೆ.