.ಈ ಪೋಸ್ಟ್' ಹಾಕಿರುವುದರಿಂದ ನಾನು ಕೆಲಸ ಕಳೆದುಕೊಂಡರೂ ನನಗೆ ಯಾವುದೇ ಭಯವಿಲ್ಲ.

ನವದೆಹಲಿ(ಜ.10): ಫೇಸ್'ಬುಕ್'ನಲ್ಲಿ ಯೋಧರಿಗೆ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ಪೋಸ್ಟ್ ಹಾಕಿದ್ದ ಬಿಎಸ್'ಎಫ್ ಯೋಧನನ್ನು ಈಗ ಪ್ಲಂಬರ್ ಕೆಲಸಕ್ಕೆ ವರ್ಗಾಯಿಸಲಾಗಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಬಿಎಸ್'ಎಫ್'ನ ಮುಖ್ಯ ಕಚೇರಿಯ ಕ್ಯಾಂಪ್'ಗೆ ವರ್ಗಾಯಿಸಲಾಗಿದ್ದು, ಅಲ್ಲಿ ಪ್ಲಂಬರ್ ಕೆಲಸ ನೀಡಲಾಗಿದೆ.ಈ ಪೋಸ್ಟ್' ಹಾಕಿರುವುದರಿಂದ ನಾನು ಕೆಲಸ ಕಳೆದುಕೊಂಡರೂ ನನಗೆ ಯಾವುದೇ ಭಯವಿಲ್ಲ. ಸೇನೆಯಲ್ಲಿನ ವಾಸ್ತವದ ಬಗ್ಗೆ ವಿಡಿಯೋದಲ್ಲಿ ತಿಳಿಸಿದ್ದೇನೆ.ನನ್ನಿಂದಾದರೂ ಸೈನಿಕರಿಗೆ ಅನುಕೂಲವಾಗಲಿ, ಅದಕ್ಕಾಗಿ ನಾನು ಹೋರಾಡಲು ಸಿದ್ಧನಿದ್ದೇನೆ' ಎಂದು ವರದಿ ಮಾಡಿದೆ.

 29 ವರ್ಷದ ತೇಜ್ ಬಹುದ್ದೂರ್ ಯಾದವ್ 29ನೇ ಬೆಟಾಲಿಯನ್ ಸಶಸ್ತ್ರ ಸೀಮಾ ದಳ'ನಲ್ಲಿ ಕೆಲಸ ಮಾಡುತ್ತಿದ್ದು, ಯೋಧರಿಗೆ ಕಳಪೆ ಆಹಾರ ನೀಡುತ್ತಿರುವ ಬಗ್ಗೆ ಫೇಸ್'ಬುಕ್'ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದ. ಈ ವಿಡಿಯೋ ರಾಷ್ಟ್ರದಾದ್ಯಂತ ಸುದ್ದಿಯಾಗಿ ಗೃಹಸಚಿವರು ಈ ಸುದ್ದಿಯ ಬಗ್ಗೆ ಬಿಎಸ್'ಎಫ್ ಅಧಿಕಾರಿಗಳನ್ನು ಸ್ಪಷ್ಟನೆ ಕೇಳಿದ್ದರು. ಬಿಎಸ್'ಎಫ್ ಈತನ ಆರೋಪವನ್ನು ನಿರಾಕರಿಸಿ ಇವನೊಬ್ಬ ಮದ್ಯ ವ್ಯಸನಿಯಾಗಿದ್ದು, ಸೇನೆಗೆ ಸೇರಿದಾಗಿನಿಂದಲೂ ಆತನಿಗೆ ನಿರಂತರ ಕೌನ್ಸಿಲಿಂಗ್ ಮಾಡಲಾಗುತ್ತಿದೆ. ಅಲ್ಲದೇ, ಪೂರ್ವಾನುಮತಿಯಿಲ್ಲದೇ ಆತ ಸೇವೆಗೆ ಗೈರು ಹಾಜರಾಗುತ್ತಾನೆ. ಹಿರಿಯ ಅಧಿಕಾರಿಗಳೊಂದಿಗೂ ಅಸಭ್ಯವಾಗಿ ವರ್ತಿಸುತ್ತಿದ್ದಾನೆ' ಎಂದು ತಿಳಿಸಿತ್ತು.