ರೈಲಿನಲ್ಲಿ ಸೀಟ್ ವಿಚಾರವಾಗಿ ಆರಂಭವಾದ ಜಗಳವು ಒಬ್ಬ ಯುವಕನ ಕೊಲೆಯಲ್ಲಿ ಅಂತ್ಯವಾದ ಘಟನೆ ಹರ್ಯಾಣದ ಪಲ್ವಾಲ್’ನಲ್ಲಿ ನಡೆದಿದೆ. ಜುನೈದ್ ಹಾಗೂ ಆತನಿಬ್ಬರು ಸಹೋದರರು ಶುಕ್ರವಾರ ದೆಹಲಿಯಲ್ಲಿ ಈದ್ ಖರೀದಿ ಮುಗಿಸಿ ತಮ್ಮ ಊರು ಬಲ್ಲಾಬ್’ಗಢಕ್ಕೆ ವಾಪಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಪಲ್ವಾಲ್, ಹರ್ಯಾಣ: ರೈಲಿನಲ್ಲಿ ಸೀಟ್ ವಿಚಾರವಾಗಿ ಆರಂಭವಾದ ಜಗಳವು ಒಬ್ಬ ಯುವಕನ ಕೊಲೆಯಲ್ಲಿ ಅಂತ್ಯವಾದ ಘಟನೆ ಹರ್ಯಾಣದ ಪಲ್ವಾಲ್’ನಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜುನೈದ್ ಹಾಗೂ ಆತನಿಬ್ಬರು ಸಹೋದರರು ಗುರುವಾರ ದೆಹಲಿಯಲ್ಲಿ ಈದ್ ಖರೀದಿ ಮುಗಿಸಿ ತಮ್ಮ ಊರು ಬಲ್ಲಾಬ್’ಗಢಕ್ಕೆ ವಾಪಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ರೈಲಿನಲ್ಲಿ ಸೀಟು ವಿಚಾರವಾಗಿ ಇತರ ಪ್ರಯಾಣಿಕರೊಂದಿಗೆ ಮಾತಿಗೆ ಮಾತು ಬೆಳೆದಿದೆ, ಆ ಸಂದರ್ಭದಲ್ಲಿ ಒಬ್ಬ ಜುನೈದ್’ಗೆ ಚಾಕುವಿನಿಂದ ಇರಿದಿದ್ದಾನೆ. ಗುಂಪು ಬಳಿಕ ಜುನೈದ್’ನ ಸಹೋದರರಿಗೆ ಬರ್ಬರವಾಗಿ ಥಳಿಸಿದೆ.

ಥಳಿಸುವ ಮುನ್ನ ಅವರು ತಮ್ಮ ಚೀಲಗಳಲ್ಲಿ ಗೋಮಾಂಸ ಕೊಂಡೊಯ್ಯುತ್ತಿದ್ದಾರೆಂದು ಗುಲ್ಲೆಬ್ಬಿಸಲಾಗಿತ್ತು ಎಂದು ವರದಿಯಾಗಿದೆ. ನಮ್ಮನ್ನು ಥಳಿಸುವಾಗ ಆ ಗುಂಪು ನಮ್ಮ ಧರ್ಮವನ್ನು ನಿಂದಿಸಿತಲ್ಲದೇ, ಗೋಮಾಂಸ ತಿನ್ನುವವರೆಂದು ಹೀಯಾಳಿಸಲಾಯಿತೆಂದು ಓರ್ವ ಸಹೋದರ ಏಎನ್’ಐಗೆ ತಿಳಿಸಿದ್ದಾನೆ.

ಘಟನೆಗೆ ಸಂಬಂಧಿಸಿದಂತೆ ಓರ್ವನನ್ನು ಹರ್ಯಾಣ ಪೊಲೀಸರು ಬಂಧಿಸಿದ್ದಾರೆ.