ಅಂತ್ರಾ ದಾಸ್ ಕೆಲಸ ಮಾಡುತ್ತಿದ್ದ ಕ್ಯಾಪ್'ಜೆಮಿನಿ ಕಂಪನಿಯ ಸುಮಾರು ಅರ್ಧ ಕಿ.ಮೀ. ದೂರದಲ್ಲೇ ಈ ಘಟನೆ ನಡೆದಿದ್ದು, ಹಂತಕನು ಮೊದಲು ಆಕೆಯೊಂದಿಗೆ ವಾಗ್ವಾದ ನಡೆಸಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಮುಂಬೈ (ಡಿ.25): ಮಹಿಳಾ ಟೆಕ್ಕಿಯೊಬ್ಬಳನ್ನು ಅಟ್ಟಾಡಿಸಿ ನಡುರಸ್ತೆಯಲ್ಲೇ ಕೊಲೆ ಮಾಡಿರುವ ಭೀಕರ ಘಟನೆ ಪುಣೆಯಲ್ಲಿ ನಡೆದಿದೆ.

ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಕೊಲೆಯಾದ ಟೆಕ್ಕಿಯನ್ನು ಕೋಲ್ಕತಾ ಮೂಲದ ಅಂತ್ರಾ ದಾಸ್​(23) ಎಂದು ಗುರುತಿಸಲಾಗಿದೆ.

ಅಂತ್ರಾ ದಾಸ್ ಕೆಲಸ ಮಾಡುತ್ತಿದ್ದ ಕ್ಯಾಪ್'ಜೆಮಿನಿ ಕಂಪನಿಯ ಸುಮಾರು ಅರ್ಧ ಕಿ.ಮೀ. ದೂರದಲ್ಲೇ ಈ ಘಟನೆ ನಡೆದಿದ್ದು, ಹಂತಕನು ಮೊದಲು ಆಕೆಯೊಂದಿಗೆ ವಾಗ್ವಾದ ನಡೆಸಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಬಳಿಕ ಆಕೆಯನ್ನು ಅಟ್ಟಾಡಿಸಿ ಹೋಗಿ ಚಾಕುವಿನಿಂದ ಕತ್ತು ಹಾಗೂ ತಲೆಗೆ ಇರಿದಿದ್ದಾನೆ ಎನ್ನಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಅಂತ್ರಾ, ಸಹಾಯಕ್ಕಾಗಿ ರಸ್ತೆಯಲ್ಲಿ ಒಡಿದ್ದಾಳೆ, ಹಾಗೂ ಬೈಕ್' ಸವಾರರಿಂದ ನೆರವು ಕೇಳಿದ್ದಾಳೆ. ಬೈಕ್ ಸವಾರ ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ದಾರಿಮಧ್ಯೆಯೇ ಆಕೆ ಕೊನೆಯುಸಿರೆಳೆದಿದ್ದಾಳೆ.