ಬೆಂಗಳೂರು (ಡಿ. 01): ನಗರದಲ್ಲಿ ಟೆಕ್ಕಿ ಅಜಿತಾಬ್  ಹೋಲುವ ಮತ್ತೊಂದು ಪ್ರಕರಣ ನಡೆದಿದೆ.  ಈ ಪ್ರಕರಣ ಸಿಲಿಕಾನ್ ಸಿಟಿ ಮಂದಿಯನ್ನು ಬೆಚ್ಚಿ ಬೀಳಿಸುವಂತಿದೆ. 

ಸಾಫ್ಟ್ ವೇರ್ ಕಂಪನಿ ಉದ್ಯೋಗಿ ಪ್ರಸನ್ನ ರಾಮಚಂದ್ರ (39) ನಿಗೂಢ ರೀತಿಯಲ್ಲಿ ಕಿಡ್ನ್ಯಾಪ್ ಆಗಿದ್ದಾರೆ.  ವಾಯು ವಿಹಾರಕ್ಕೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ಪ್ರಸನ್ನ ರಾಮಚಂದ್ರ  20 ದಿನವಾದರೂ ವಾಪಸ್ ಬಾರದಿದ್ದರಿಂದ ಆತಂಕಗೊಂಡ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. 

ನಿಮ್ಮ ಯಜಮಾನರು ನಮ್ಮ ಬಳಿ ಇದ್ದಾರೆ. ಪೊಲೀಸರ ಬಳಿ ಹೋಗಬೇಡಿ ಎಂದು ಮೆಸೇಜ್ ಪ್ರಸನ್ನ ಪತ್ನಿಯ ಮೊಬೈಲ್ ಗೆ ಆಗಂತುಕರು ಮೆಸೇಜ್ ಮಾಡಿದ್ದಾರೆ.  ಗಾಬರಿಗೊಂಡ ಪ್ರಸನ್ನ ಪತ್ನಿ ಬನಶಂಕರಿ ಠಾಣೆಗೆ ದೂರು ನೀಡಿದ್ದಾರೆ. ಬನಶಂಕರಿ ಪೊಲೀಸರ ಪ್ರಸನ್ನಗಾಗಿ ಹುಡುಕಾಟ ನಡೆಸುತ್ತಿದ್ದಾರೆ. 

ಲಂಡನ್ ಟಿ.ಸಿ.ಎಸ್ ಕಂಪನಿಯಲ್ಲಿ ಕೆಲಸ ಮಾಡಿ ಬೆಂಗಳೂರಿಗೆ ವಾಪಸ್ಸಾಗಿದ್ದರು ಪ್ರಸನ್ನ.  ಕಳೆದ 4 ವರ್ಷಗಳಿಂದಲೂ ಬೆಂಗಳೂರಿನ ಟಿ.ಸಿ.ಎಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.