ಶಾಲೆಯಲ್ಲಿ ಮಕ್ಕಳ ಎದುರೇ ಶಿಕ್ಷಕಿ ಪತ್ನಿ ಮೇಲೆ‌‌ ಪೆಟ್ರೋಲ್‌ ಸುರಿದು ಕೊಲೆ ಮಾಡಲು ಪತಿಯೊಬ್ಬ ಯತ್ನಿಸಿದ ಘಟನೆ ಮಾಗಡಿಯಲಲ್ಲಿ ನಡೆದಿದೆ. ಮಾಗಡಿ ತಾಲೂಕಿನ ಶಂಭಯ್ಯನಪಾಳ್ಯದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದ್ದು ಸುನಂದಾ (50) ತಮ್ಮ ಪತಿ ದುಷ್ಕೃತ್ಯದಿಂದ ಶೇ.50 ರಷ್ಟು ಸುಟ್ಟ ಗಾಯಗಳೊಂದಿಗೆ ನರಳುತ್ತಿದ್ದಾರೆ.
ಮಾಗಡಿ: ಶಾಲೆಯಲ್ಲಿ ಮಕ್ಕಳ ಎದುರೇ ಶಿಕ್ಷಕಿ ಪತ್ನಿ ಮೇಲೆ ಪೆಟ್ರೋಲ್ ಸುರಿದು ಕೊಲೆ ಮಾಡಲು ಪತಿಯೊಬ್ಬ ಯತ್ನಿಸಿದ ಘಟನೆ ಮಾಗಡಿಯಲಲ್ಲಿ ನಡೆದಿದೆ.
ಮಾಗಡಿ ತಾಲೂಕಿನ ಶಂಭಯ್ಯನಪಾಳ್ಯದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದ್ದು ಸುನಂದಾ (50) ತಮ್ಮ ಪತಿ ದುಷ್ಕೃತ್ಯದಿಂದ ಶೇ.50 ರಷ್ಟು ಸುಟ್ಟ ಗಾಯಗಳೊಂದಿಗೆ ನರಳುತ್ತಿದ್ದಾರೆ.
ಗ್ರಾಮದ ಶಾಲೆಯಲ್ಲಿದ್ದ ವೇಳೆ ಏಕಾ ಏಕಿ ಶಾಲೆಗೆ ನುಗ್ಗಿದ ಪತಿ ರೇಣುಕಾರಾಧ್ಯ ತರಗತಿಯಲ್ಲಿದ್ದ ಮಕ್ಕಳ ಎದುರೇ, ಸುನಂದಾ ಅವರೊಂದಿಗೆ ಜಗಳಕ್ಕಿಳಿದಿದ್ದಾನೆ. ನೋಡು ನೋಡುತ್ತಿದ್ದಂತೆ ಸುನಂದಾ ಮೇಲೆ ಬಾಟಲಿಯಲ್ಲಿ ತಂದಿದ್ದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಮಕ್ಕಳ ಗಲಾಟೆ ಕೇಳಿ ತಕ್ಷಣ ಸ್ಥಳಕ್ಕೆ ಧಾವಿಸಿದ ಇತರ ಶಿಕ್ಷಕರು ಹಾಗೂ ಗ್ರಾಮಸ್ಥರು ಬೆಂಕಿ ನಂದಿಸಿ ಮಾಗಡಿ ತಾಲೂಕು ಆಸ್ಪತ್ರೆಗೆ ಸುನಂದಾ ಅವರನ್ನು ದಾಖಲಿಸಿದ್ದಾರೆ.
ರೇಣುಕಾರಾಧ್ಯ ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ರೋಪಿಗಾಗಿ ಬಲೆ ಬೀಸಿದ್ದಾರೆ.
