ತೆಂಗಿನ ಕಾಯಿ ಚೂರು ಗಂಟಲಲ್ಲಿ ಸಿಲುಕಿ ಶಿಕ್ಷಕಿ ಸಾವು

Teacher Died While Eating Coconut
Highlights

ಗಂಟಲಿನಲ್ಲಿ ತೆಂಗಿನ ಕಾಯಿ ಸಿಲುಕಿ ಶಿಕ್ಷಕಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. 

ಚಿಕ್ಕಮಗಳೂರು (ಫೆ.10): ಗಂಟಲಿನಲ್ಲಿ ತೆಂಗಿನ ಕಾಯಿ ಸಿಲುಕಿ ಶಿಕ್ಷಕಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. 

ಚಿಕ್ಕಮಗಳೂರು ನಗರದ ಸಂಜೀವಿನಿ ಶಾಲೆಯಲ್ಲಿ ಘಟನೆ  ನಡೆದಿದೆ. ಈ ಶಾಲೆಯ  ಶಿಕ್ಷಕಿ ನವ್ಯಶ್ರೀ  ಮೃತಪಟ್ಟವರು. ಶಾಲೆ ಪಕ್ಕದಲ್ಲಿರೋ ಸಾಲಮರದಮ್ಮ ದೇವಾಲಯದಲ್ಲಿ ಪೂಜೆ ಮುಗಿಸಿ ತೆಂಗಿನ ಕಾಯಿ  ತಿನ್ನುವಾಗ ಗಂಟಲಿನಲ್ಲಿ ಕಾಯಿ ಚೂರು ಸಿಕ್ಕಿ  ಉಸಿರು ಕಟ್ಟಿ ಸಾವನ್ನಪ್ಪಿದ್ದಾರೆ.  ನಗರದ ಹೊಲಿಕ್ರಾಸ್ ಆಸ್ಪತ್ರೆಯಲ್ಲಿ ಮೃತದೇಹ ಇಡಲಾಗಿದೆ.  ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 

loader