ಹೋಮ್​ ವರ್ಕ್​ ಮಾಡಿಲ್ಲ ಅನ್ನೋ ಕಾರಣಕ್ಕೆ ಶಿಕ್ಷಕನೋರ್ವ ವಿದ್ಯಾರ್ಥಿಗಳನ್ನು ದನ ಬಡಿದಂತೆ ಬಡಿದಿರೋ ಘಟನೆ ಹರಿಯಾಣದಲ್ಲಿ ನಡೆದಿದೆ

ಹರಿಯಾಣ (ಸೆ.30): ಹೋಮ್​ ವರ್ಕ್​ ಮಾಡಿಲ್ಲ ಅನ್ನೋ ಕಾರಣಕ್ಕೆ ಶಿಕ್ಷಕನೋರ್ವ ವಿದ್ಯಾರ್ಥಿಗಳನ್ನು ದನ ಬಡಿದಂತೆ ಬಡಿದಿರೋ ಘಟನೆ ಹರಿಯಾಣದಲ್ಲಿ ನಡೆದಿದೆ. ವಿದ್ಯಾರ್ಥಿಗಳ ಮೇಲೆ ಹಲ್ಲೆ ನೆಡೆಸಿದ ಶಿಕ್ಷಕನನ್ನು ಪ್ರದೀಪ್ ಎಂದು ಗುರುತಿಸಲಾಗಿದೆ. ಈ ಘಟನೆಯ ದೃಶ್ಯಾವಳಿಗಳು ಕೋಚಿಂಗ್​ ಕ್ಲಾಸ್​ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

10ನೇ ತರಗತಿಯ ಸುಮಾರು 12 ವಿದ್ಯಾರ್ಥಿಗಳು ಹೋಮ್​ ವರ್ಕ್​ ಮಾಡಿಲ್ಲ ಅನ್ನೋ ಕಾರಣಕ್ಕೆ ಮತ್ತು ತರಗತಿಗೆ ತಡವಾಗಿ ಬಂದವರಿಗೆ ಹಾಗೂ ಪರೀಕ್ಷೆಯಲ್ಲಿ ಕಡಿಮೆ ಅಂಕ ತೆಗೆದುಕೊಂಡವರಿಗೆ ಮನಬಂದತೆ ಶಿಕ್ಷಕ ಥಳಿಸಿದ್ದಾನೆ. ಹೆಣ್ಣು ಮಕ್ಕಳ ಕೂದಲನ್ನು ಹಿಡಿದು ಹೊಡೆದಿದ್ದಾನೆ. ಮತ್ತೆ ಕೆಲವು ವಿದ್ಯಾರ್ಥಿಗಳಿಗೆ ಕೋಲಿನಿಂದ ಹೊಡೆದಿದ್ದಾನೆ. ಹೀಗೆ ಮಕ್ಕಳನ್ನು ಮನಬಂದಂತೆ ದಂಡಿಸಿದ್ದಾನೆ. ಹರಿಯಾಣದ ಕರ್ನಾಲ್​ ಜಿಲ್ಲೆಯಲ್ಲಿನ ಕೋಚಿಂಗ್​ ಕ್ಲಾಸ್​ವೊಂದರಲ್ಲಿ ನಡೆದ ಈ ಘಟನೆ ಅಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಪೊಲಿಸರು ಶಿಕ್ಷಕರ ವಿರುದ್ದ ಎಫ್​ಐಆರ್​ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.