ಯೂ ಟ್ಯೂಬ್ ನೋಡಿ ಹೆರಿಗೆ ಮಾಡಿಕೊಂಡು ಶಿಕ್ಷಕಿ ಸಾವು

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 27, Jul 2018, 11:26 AM IST
Teacher allegedly attempted home birth with YouTube videos Died
Highlights

ಮನೆಯಲ್ಲೇ ಯುಟ್ಯೂಬ್ ನೋಡಿಕೊಂಡು ಹೆರಿಗೆ ಮಾಡಿಕೊಳ್ಳಲು ಹೋದ ಮಹಿಳೆಯೊಬ್ಬರು ರಕ್ತಸ್ರಾವದಿಂದ ಸಾವನ್ನಪ್ಪಿದ ವಿಚಿತ್ರ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಚೆನ್ನೈ: ಸೂಕ್ತ ಚಿಕಿತ್ಸೆ ದೊರೆಯದೆ ಮಹಿಳೆಯರು ಹೆರಿಗೆ ಸಮಯದಲ್ಲಿ ಸಾವನ್ನಪ್ಪುವ ಘಟನೆ ಎಲ್ಲೆಡೆ ಸಾಮಾನ್ಯ. ಆದರೆ ಎಲ್ಲಾ ಸೌಲಭ್ಯ  ದ್ದರೂ, ಅದನ್ನು ಬಳಸುವ ಬದಲು, ಮನೆಯಲ್ಲೇ ಯುಟ್ಯೂಬ್ ನೋಡಿಕೊಂಡು ಹೆರಿಗೆ ಮಾಡಿಕೊಳ್ಳಲು ಹೋದ ಮಹಿಳೆಯೊಬ್ಬರು ರಕ್ತಸ್ರಾವದಿಂದ ಸಾವನ್ನಪ್ಪಿದ ವಿಚಿತ್ರ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಕೃತಿಕಾ (28 )ಗೆ ಆಧುನಿಕ ವೈದ್ಯಕೀಯ ಚಿಕಿತ್ಸೆ ಬಗ್ಗೆ ಒಲವು ಇರಲಿಲ್ಲ. ಜೊತೆಗೆ ಅವರ ಕುಟುಂಬ ಸ್ನೇಹಿತರೊಬ್ಬರು ಕೂಡಾ ಮನೆಯಲ್ಲೇ ಸುಲಭವಾಗಿ ಹೆರಿಗೆ ಮಾಡಿಕೊಳ್ಳಬಹುದು ಎಂದು ಪುಕ್ಕಟೆ ಸಲಹೆ ನೀಡಿದ್ದರು. ಹೀಗಾಗಿ ಖಾಸಗಿ ಕಂಪನಿಯ ನೌಕರನಾದ ಕಾರ್ತಿಕೇ ಯನ್ ಮತ್ತು ಕೃತಿಕಾ ಹಲವು ಬಾರಿ ಯಟ್ಯೂಬ್‌ನಲ್ಲಿ ಮನೆಯಲ್ಲೇ ಹೇಗೆ ಹೆರಿಗೆ ಮಾಡಿಕೊಳ್ಳುವುದು ಎಂಬ ವಿಡಿಯೋಗಳನ್ನು ವೀಕ್ಷಿಸಿದ್ದರು. 

ಕೃತಿಕಾಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಮನೆಯಲ್ಲೇ ಹೆರಿಗೆಗೆ ಮುಂದಾದರು. ಆದರೆ ಸೂಕ್ತ ಸಮಯದಲ್ಲಿ ಮಾಸು ಹೊರಬರದ ಕಾರಣ, ತೀವ್ರ ರಕ್ತಸ್ರಾವದಿಂದ ಕೃತಿಕಾ ಸಾವನ್ನಪ್ಪಿದ್ದಾರೆ. 

loader