ಮೋದಿಯನ್ನು ಹಿಜಡಾ ಎಂದು ಟೀಕಿಸಿದ ಟಿಡಿಪಿ ನಾಯಕ, ನಟ ಬಾಲಕೃಷ್ಣ: ಬಿಜೆಪಿ ಆಕ್ರೋಶ

TDP Leader Slams PM Modi
Highlights

ತೆಲುಗಿನ ಖ್ಯಾತನ ನಟ, ಟಿಡಿಪಿ ಶಾಸಕ ನಂದಮೂರಿ ಬಾಲಕೃಷ್ಣ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಜಡಾ ಎಂದು ಅವಹೇಳನಕಾರಿ ಟೀಕಿಸುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ಹೈದರಾಬಾದ್‌: ತೆಲುಗಿನ ಖ್ಯಾತನ ನಟ, ಟಿಡಿಪಿ ಶಾಸಕ ನಂದಮೂರಿ ಬಾಲಕೃಷ್ಣ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಜಡಾ ಎಂದು ಅವಹೇಳನಕಾರಿ ಟೀಕಿಸುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ವಿಜಯವಾಡದಲ್ಲಿ ಶುಕ್ರವಾರ ನಡೆದಿದ್ದ ಧರ್ಮ ಪೋರಾಟ ದೀಕ್ಷಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಾಲಕೃಷ್ಣ, ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಾ, ಪ್ರಧಾನಿ ಮೋದಿಯವರನ್ನು ಶಿಖಂಡಿ ಮತ್ತು ಹಿಜ್ಡಾ ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೆ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕೊಡದ ಬಿಜೆಪಿ ವಿರುದ್ಧ ಹರಿಹಾಯ್ದಿರುವ ಅವರು, ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಒಂದು ಸ್ಥಾನವನ್ನೂ ಗೆಲ್ಲುವುದಿಲ್ಲ ಎಂದು ಹೇಳಿದ್ದರು.

ಈ ಹೇಳಿಕೆಗೆ ಆಕ್ರೋಶಗೊಂಡಿರುವ ಬಿಜೆಪಿ ಎಂಎಲ್‌ಸಿ ಮತ್ತು ಹೈದರಾಬಾದ್‌ ಅಧ್ಯಕ್ಷ ರಾಮಚಂದರ್‌ ರಾವ್‌ ಶನಿವಾರ ಬಾಲಕೃಷ್ಣ ವಿರುದ್ಧ ಪೊಲೀಸ್‌ ದೂರು ದಾಖಲಿಸಿದ್ದಾರೆ.

loader