ಮಿಲನ, ವಂಶಿ ಮುಂತಾದ ಹಿಟ್ ಚಿತ್ರಗಳನ್ನು ನೀಡಿದ ಪ್ರಕಾಶ್ ಈ ಚಿತ್ರವನ್ನು ನಿರ್ದೇಶಿಸಿದ್ದು, ಲಕ್ಷ್ಮಣ ದುಶ್ಯಂತ್ ನಿರ್ಮಿಸಿದ್ದಾರೆ.
ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ 1.13 ನಿಮಿಷದ ತಾರಕ್ ಸಿನಿಮಾ ಟೀಸರ್ ಯುಟ್ಯೂಬಿನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಈಗಾಗಲೇ ಮೂರು ದಿನದಲ್ಲಿ 7 ಲಕ್ಷ ಮಂದಿ ಟೀಸರ್ ವೀಕ್ಷಿಸಿದ್ದಾರೆ.
ಮಿಲನ, ವಂಶಿ ಮುಂತಾದ ಹಿಟ್ ಚಿತ್ರಗಳನ್ನು ನೀಡಿದ ಪ್ರಕಾಶ್ ಈ ಚಿತ್ರವನ್ನು ನಿರ್ದೇಶಿಸಿದ್ದು, ಲಕ್ಷ್ಮಣ ದುಶ್ಯಂತ್ ನಿರ್ಮಿಸಿದ್ದಾರೆ. ಮುದ್ದು ಮುಖದ ಚಲುವೆ ಶೃತಿ ಹರಿಹರನ್ ಹಾಗೂ ಶಾನ್ವಿ ಶ್ರೀವಾತ್ಸವ್ ಮುಖ್ಯ ಪಾತ್ರದಲ್ಲಿದ್ದರೆ ಡೈನಾಮಿಕ್ ಸ್ಟಾರ್ ದೇವರಾಜ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಹಾಸ್ಯ ಪಾತ್ರದಲ್ಲಿ ಸಾಧು ಕೋಕಿಲ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿರುವ 6 ಹಾಡುಗಳಿಗೆ ಜಯಂತ್ ಕಾಯ್ಕಣಿ ಹಾಗೂ ವಿ. ನಾಗೇಂದ್ರ ಪ್ರಸಾದ್ ಗೀತೆ ರಚಿಸಿದ್ದಾರೆ.
