ಸೇನಾ ಕಾರ್ಯಾಗಾರದಲ್ಲಿದ್ದ ಟ್ಯಾಂಕ್ ಅಪಹರಿಸಿ ಸಿಟಿ ರೌಂಡ್ಸ್ ಹೋದ ಸೈನಿಕ2 ಗಂಟೆಗಳ ಸತತ ಕಾರ್ಯಾಚರಣೆ ಬಳಿಕ ಸೈನಿಕನನ್ನು ಬಂಧಿಸಿದ ಪೊಲೀಸರುಟ್ಯಾಂಕ್‌ನಲ್ಲಿ ಯಾವುದೇ ಶಸ್ತ್ರಗಳಿರಲಿಲ್ಲ ಎಂದು ಖಚಿತಪಡಿಸಿದ ಪೊಲೀಸರುಟ್ಯಾಂಕ್ ಅಪಹರಣಕ್ಕೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ  

ವರ್ಜಿನಿಯಾ(ಜೂ.6): ಹಿರಿಯ ಸೇನಾಧಿಕಾರಿಗಳ ಮೇಲಿನ ಕೋಪಕ್ಕೆ ಸೈನಿಕನೋರ್ವ ಸೇನಾ ಕಾರ್ಯಾಗಾರದಲ್ಲಿದ್ದ ಟ್ಯಾಂಕ್‌ವೊಂದನ್ನೇ ಅಪಹರಿಸಿದ ಘಟನೆ ಅಮೆರಿಕದ ವರ್ಜಿನಿಯಾದಲ್ಲಿ ನಡೆದಿದೆ.

ಆಗಷ್ಟೇ ಕರ್ತವ್ಯ ನಿರ್ವಹಿಸಿ ಸೇನಾ ಕಾರ್ಯಾಗಾರಕ್ಕೆ ಬಂದು ನಿಂತ ಟ್ಯಾಂಕ್‌ನ್ನು ಸೈನಿಕನೋರ್ವ ಅಪಹರಿಸಿ ಕೊಂಡೊಯ್ದಿದ್ದಾನೆ. ಈ ವಾಹನವನ್ನು ಸುಮಾರು 2 ಗಂಟೆಗಳ ಕಾಲ ನಗರದಾದ್ಯಂತ ಸುತ್ತಾಡಿಸಿದ ಸೈನಿಕ ಕೊನೆಯಲ್ಲಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ಸೈನಿಕನನ್ನು ಸಿನೀಮಯ ರೀತಿಯಲ್ಲಿ ಚೇಸ್ ಮಾಡಿದ ಪೊಲೀಸರು ನಗರದ ರಿಚಮಂಡ್ ರೋಡ್‌ನಲ್ಲಿ ವಾಹನವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕೂಡಲೇ ಸೈನಿಕನನ್ನು ವಶಕ್ಕೆ ಪಡೆದ ಪೊಲೀಸರು, ವಾಹನವನ್ನು ಮತ್ತೆ ಸೇನಾ ಕಾರ್ಯಾಗಾರದ ಸುಪರ್ದಿಗೆ ಒಪ್ಪಿಸಿದ್ದಾರೆ.

Scroll to load tweet…

ಇನ್ನು ಈ ಸೈನಿಕ ಟ್ಯಾಂಕ್‌ನ್ನು ಅಪಹರಿಸಿದ್ದೇಕೆ ಎಂಬುದು ನಿರ್ದಿಷ್ಟವಾಗಿ ತಿಳಿದು ಬಂದಿಲ್ಲವಾದರೂ ಹಿರಿಯ ಸೇನಾಧಿಕಾರಿಗಳ ಮೇಲೆ ಈತ ಕೋಪಗೊಂಡಿದ್ದ ಎಂದು ಹೇಳಲಾಗುತ್ತಿದೆ. ಸೈನಿಕ ಈ ವಾಹನವನ್ನು ಅಪಹರಿಸಿದಾಗ ಅದೃಷ್ಟವಶಾತ ಇದರಲ್ಲಿ ಯಾವುದೇ ಶಸ್ತ್ರ ತುಂಬಿರಲಿಲ್ಲ ಎಂದು ಮೂಲಗಳು ತಿಳಿಸಿವೆ.