ಕಾವೇರಿ ವಿಚಾರ ಯಾವಾಗಲೂ ಹೊಗೆಯಾಡ್ತಾನೆ ಇರುತ್ತೆ. ಇದೀಗ ಕಾವೇರಿ ನೀರಿಗಾಗಿ ತಮಿಳುನಾಡು ಮತ್ತೆ ಕ್ಯಾತೆ ತೆಗೆದಿದೆ. ಕರ್ನಾಟಕ ತಮಿಳುನಾಡಿಗೆ ಸರಿಯಾಗಿ ನೀರು ಬಿಡುತ್ತಿಲ್ಲ ಅಂತ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದೆ.

ಚೆನ್ನೈ(ಜು.05): ಕಾವೇರಿ ವಿಚಾರ ಯಾವಾಗಲೂ ಹೊಗೆಯಾಡ್ತಾನೆ ಇರುತ್ತೆ. ಇದೀಗ ಕಾವೇರಿ ನೀರಿಗಾಗಿ ತಮಿಳುನಾಡು ಮತ್ತೆ ಕ್ಯಾತೆ ತೆಗೆದಿದೆ. ಕರ್ನಾಟಕ ತಮಿಳುನಾಡಿಗೆ ಸರಿಯಾಗಿ ನೀರು ಬಿಡುತ್ತಿಲ್ಲ ಅಂತ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದೆ.

2016 ರಲ್ಲಿ ಕರ್ನಾಟಕದಿಂದ 6 ಟಿಎಂಸಿ ನೀರು ಕಡಿಮೆ ಬಿಡಲಾಗಿದೆ. ಹಾಗಾಗಿ ನಮಗೆ ಬರಬೇಕಾದ ನೀರು ಬಿಡಿಸಿ, ನಮಗೆ ನ್ಯಾಯ ಕೊಡಿಸಿ ಅಂತ ಆಗ್ರಹಿಸಿ, ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದೆ.

ಕರ್ನಾಟಕದಲ್ಲಿ ಸರಿಯಾದ ಮಳೆ ಬೀಳದೇ, ಕಾವೇರಿ ಒಡಲಿನಲ್ಲಿ ನೀರಿಲ್ಲದ ಸಮಯದಲ್ಲೇ ತಮಿಳುನಾಡು ಕ್ಯಾತೆ ತೆಗಿದಿರುವುದು ಮತ್ತೊಂದು ಸಂಕಷ್ಟ ಎದುರಾದಂತಾಗಿದೆ.