ಮೈಸೂರು(ಸೆ.13): ಕರ್ನಾಟಕಕ್ಕೆ ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾದ ಹಿನ್ನಲೆಯಲ್ಲಿ ಮೈಸೂರಿನಲ್ಲಿ ನಡೆಯುತ್ತಿದ್ದ ತಮಿಳು ಚಿತ್ರದ ಶೂಟಿಂಗ್'ಗೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಅಡ್ಡಿ ಪಡಿಸಿದ್ದಾರೆ.
ಲಲಿತಮಹಲ್ ಪ್ಯಾಲೇಸ್ನಲ್ಲಿ ನಡೆಯುತ್ತಿದ್ದ ತಮಿಳು ಚಿತ್ರದ ಶೂಟಿಂಗ್'ನಲ್ಲಿ ತಮಿಳುನಾಡು ಪೊಲೀಸ್ ಬ್ಯಾನರ್ ಇದ್ದದ್ದನ್ನು ಕಂಡು ರೊಚ್ಚಿಗೆದ್ದ ಕಾರ್ಯಕರ್ತರು ಶೂಟಿಂಗ್ ನಡೆಸದಂತೆ ಪ್ರತಿಭಟನೆ ಮಾಡಿದ್ದಾರೆ.
ಶೂಟಿಂಗ್'ಗೆ ಹಾಕಿದ್ದ ಬ್ಯಾನರ್, ಬೋರ್ಡ್, ಬಾವುಟ ಕಿತ್ತೆಸೆದ ಕಾರ್ಯಕರ್ತರು, ತಮಿಳುನಾಡು ಬಾವುಟಕ್ಕೆ ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ಈ ಪ್ರಯತ್ನಕ್ಕೆ ಪೊಲೀಸರು ಅಡ್ಡಿ ಪಡಿಸಿದ್ದು, ಈ ಸಂದರ್ಭದಲ್ಲಿ ಕರವೇ ಮುಖಂಡ ಮಾದೇಶ್ ಸೇರಿ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.
