ಕಾಲಿವುಡ್ಡಿನ ಉದಯೋನ್ಮುಖ ನಟಿಯೊಬ್ಬರು ನೇಣಿಗೆ ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಚೆನ್ನೈ, (ನ.30): ತಮಿಳು ಚಿತ್ರರಂಗದ ಉದಯೋನ್ಮುಖ ನಟಿ ರಿಯಾಮಿಕಾ (26) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚೆನ್ನೈ ವಲಸರವಕ್ಕಮ್ನಲ್ಲಿರುವ ಅವರ ನಿವಾಸದಲ್ಲಿ ನೇಣಿಗೆ ಶರಣಗಿದ್ದು, ಆತ್ಮಹತ್ಯೆಗೆ ಕಾರಣ ಏನು ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರಿಯಾಮಿಕಾ ತಮಿಳು ಚಿತ್ರರಂಗದ ಉದಯೋನ್ಮುಖ ನಟಿಯಾಗಿದ್ದರು. ಎಕ್ಸ್ ವಿಡಿಯೋಸ್, ಕುಮಾರನುಕು ಕೊಂಡಾಟ್ಟಮ್ ಮತ್ತು ಅಘೋರಿಯಿನ್ ಅಟ್ಟಮ್ ಮುಂತಾದ ಚಿತ್ರಗಳಲ್ಲಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ರಿಯಾಮಿಕಾ ತನ್ನ ಸಹೋದರ ಪ್ರಕಾಶ್ರೊಂದಿಗೆ ವಲಸರವಕ್ಕಮ್ನ ಶ್ರೀದೇವಿ ಕುಪ್ಪಂ ಪ್ರದೇಶದಲ್ಲಿ ಬಾಡಿಗೆ ಮನೆಯೊಂದರಲ್ಲಿ ಕಳೆದ ನಾಲ್ಕು ತಿಂಗಳಿನಿಂದ ವಾಸವಿದ್ದರು.
ರಿಯಾಮಿಕಾ ಮಂಗಳವಾರ ರಾತ್ರಿ ತಡವಾಗಿ ಮನೆಗೆ ಬಂದಳು. ನಾನವಳನ್ನು ಕೊನೆಯಬಾರಿಗೆ ನೋಡಿದ್ದು ಅಂದೇ, ಅಂದು ಅವಳು ತುಂಬಾ ದಣಿದಿದ್ದ ಸ್ಥಿತಿಯಲ್ಲಿದ್ದಳು ಎಂದು ಸಹೋದರ ಪ್ರಕಾಶ್ ತಿಳಿಸಿದ್ದಾರೆ.
