ತಾಜ್ 8ನೇ ಅದ್ಭುತ : ಸುಪ್ರೀಂ ವ್ಯಂಗ್ಯ

Taj Mahal colour change worries India Supreme Court
Highlights

ಐತಿಹಾಸಿಕ ತಾಜ್‌ಮಹಲ್ ವಾಯುಮಾಲಿನ್ಯದಿಂದಾಗಿ ಬಣ್ಣಗುಂದುತ್ತಿದೆ. ಇತ್ತೀಚಿನ ಚಿತ್ರಗಳನ್ನು ನೋಡಿದರೆ ತಾಜ್‌ಮಹಲ್ ಜಗತ್ತಿನ 8ನೇ ಅದ್ಭುತದಂತೆ ತೋರುತ್ತಿದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ವ್ಯಂಗ್ಯವಾಡಿದೆ. 

ನವದೆಹಲಿ: ಐತಿಹಾಸಿಕ ತಾಜ್‌ಮಹಲ್ ವಾಯುಮಾಲಿನ್ಯದಿಂದಾಗಿ ಬಣ್ಣಗುಂದುತ್ತಿದೆ. ಇತ್ತೀಚಿನ ಚಿತ್ರಗಳನ್ನು ನೋಡಿದರೆ ತಾಜ್‌ಮಹಲ್ ಜಗತ್ತಿನ 8ನೇ ಅದ್ಭುತದಂತೆ ತೋರುತ್ತಿದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ವ್ಯಂಗ್ಯವಾಡಿದೆ. 
ತಾಜ್ ಸುರಕ್ಷತೆಗೆ ಕ್ರಮಕೈಗೊಳ್ಳದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ, 17ನೇ ಶತಮಾನದ ಸ್ಮಾರಕದ ವೈಭವವನ್ನು ಮರುಸ್ಥಾಪಿಸಲು ತುರ್ತಾಗಿ ಕ್ರಮಕೈಗೊಳ್ಳಬೇಕಿದೆ. 
ಆದರೆ, ಸರ್ಕಾರ ಕಾಳಜಿ ತೋರುತ್ತಲೇ ಇಲ್ಲ. ಹಳದಿ ಬಣ್ಣಕ್ಕೆ ತಿರುಗಿದ್ದ ತಾಜ್, ಈಗ ಕಂದು ಮತ್ತು ಹಸಿರು ಬಣ್ಣಕ್ಕೆ ತಿರುಗುತ್ತಿದೆ. ತಜ್ಞರ ನೆರವು ಪಡೆದು ತಾಜ್ ಮಹಲ್ ರಕ್ಷಿಸಬೇಕು ಎಂದು ತಿಳಿಸಿದೆ ಸುಪ್ರೀಂಕೋರ್ಟ್.

loader