ದಾವಣಗೆರೆ (ಡಿ.15): ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಕಳೆದ ವರ್ಷವಷ್ಟೇ ನೂತನ ಮಿನಿವಿಧಾನಸೌಧ ಲೋಕಾರ್ಪಣೆಗೊಂಡು ಈಗ  ಸಾರ್ವಜನಿಕ ಸೇವೆ ನೀಡುತ್ತಿದೆ. ಆದರೆ ಇದೀಗ ಈ ತಾಲೂಕಾ ಕಚೇರಿಗೆ ಮತ್ತೊಂದು ಮಿನಿವಿಧಾನಸೌಧದ ಕಚೇರಿಯ ಅವಶ್ಯಕತೆಯಿದೆ ಎಂದು ತಹಸೀಲ್ದಾರ್​ ಡಿಸಿಗೆ ಪತ್ರ ಬರೆದಿದ್ದಾರೆ.

ಪಟ್ಟಣದಲ್ಲಿ ಹಲವು ಕಡೆ 14 ಕಚೇರಿಗಳು ಇವೆ. ಅವುಗಳು ಮಿನಿವಿಧಾನಸೌಧಕ್ಕೆ ಸ್ಥಳಾಂತರ ಮಾಡಿದ್ರೆ ಜಾಗ ಸಾಲುವುದಿಲ್ಲ. ಆ ಕಾರಣದಿಂದ ಅಮರಾವತಿ ಬಡಾವಣೆಯಲ್ಲಿ ಕರ್ನಾಟಕ ಗೃಹ ಮಂಡಳಿ ಅಭಿವೃದ್ಧಿಪಡಿಸಿರುವ ಸಿ ಎ ನಿವೇಶನಗಳನ್ನು ನೀಡಬೇಕೆಂದು  ತಹಶೀಲ್ದಾರ್ ಡಿಸಿ ಬಳಿ ಮನವಿ ಮಾಡಿದ್ದಾರೆ.

ಅಧಿಕಾರಿಗಳು ಹೀಗೆ ಡಿಸಿ ಬಳಿ ಬೇಡಿಕೆ ಇಡಲು ಸ್ಥಳೀಯ ಶಾಸಕ ಹೆಚ್.ಎಸ್.ಶಿವಶಂಕರ್ ಕೈವಾಡಯಿದೆ.

ಶಾಸಕರು ನಾಗರಿಕ ನಿವೇಶನದ ಹೆಸರಿನಲ್ಲಿ ಗೋಲ್ಮಾಲ್ ಮಾಡಲು ಹೊರಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

(ಸಾಂದರ್ಭಿಕ ಚಿತ್ರ)