ಎರಡು ಮಕ್ಕಳ ತಾಯಿಯಾಗಿ ಕುಮಾರಿ ಶೋಭಾ ಕರದ್ಲಾಜೆ ಅವರು ತಮ್ಮ ರಾಜಕೀಯ ಲಾಭಗಳಿಗಾಗಿ ನಮ್ಮ ಖಾಸಗಿ ಬದುಕಿನೊಳಗೆ ಪ್ರವೇಶಿಸುವುದನ್ನು ಬಲವಾಗಿ ಖಂಡಿಸುತ್ತೇನೆ.  ನಾವು ಭಾರತ ಪ್ರತಿಬಿಂಬಿಸುತ್ತಿರುವ ವೈವಿಧ್ಯತೆಯ ಏಕತೆಯನ್ನು ಪ್ರತಿನಿಧಿಸುತ್ತಿದ್ದೇವೆ. ಗೃಹಿಣಿಯಾಗಿ ಹಾಗೂ

ಬೆಂಗಳೂರು(ಜು.13): ಕಾಂಗ್ರೆಸ್ ಕಾರ್ಯಾಕಾರಿ ಅಧ್ಯಕ್ಷರ ಪತ್ನಿ ದಲಿತರೆ? ಕಾಂಗ್ರೆಸ್ಕಾರ್ಯಾಧ್ಯಕ್ಷರುಯಾರನ್ನುಮದುವೆಆಗಿದ್ದಾರೆಎಂಬುದುಎಲ್ಲರಿಗೂಗೊತ್ತಿರುವವಿಚಾರವೇಅಲ್ಲವೇ ಎಂಬ ಬಿಜೆಪಿ ನಾಯಕಿ ಶೋಭಾ ಕರದ್ಲಾಜೆ ಪ್ರಶ್ನೆಗೆ ದಿನೇಶ್ ಗುಂಡೂರಾವ್ ಪತ್ನಿ ಟಬು ರಾವ್ ತಮ್ಮ ಫೇಸ್'ಬುಕ್ ಪುಟದಲ್ಲಿ ಖಡಕ್ ಉತ್ತರ ನೀಡಿದ್ದಾರೆ.

'ನಾನು ಮುಸ್ಲಿಂ ಜನಾಂಗದಲ್ಲಿ ಜನಿಸಿರುವುದು ಹಾಗೂ ನನ್ನ ಪತಿ ದಿನೇಶ್ ಗುಂಡೂರಾವ್ ಅವರು ಬ್ರಾಹ್ಮಣರು ಎಂಬುದು ಗೋಪ್ಯವಾದ ವಿಷಯವೇನಲ್ಲ. ನಾವು ವಿವಾಹವಾದ 2 ದಶಕದಿಂದ ಸಂತೋಷದಿದ್ದೇವೆ ಅಲ್ಲದೆ ಧರ್ಮದ ಸಮಸ್ಯೆಗಳು ಬಗ್ಗೆ ಒಮ್ಮೆಯೂ ನಮ್ಮ ಮನಸ್ಸನ್ನು ದಾಟಿಲ್ಲ. ನಾವಿಬ್ಬರೂ ಪರಸ್ಪರ ಧರ್ಮಾಂತರವಾಗದೆ ಸಂಪೂರ್ಣವಾಗಿ ಸಮತೋಲಿತವಾಗಿ ಜೀವನ ನಡೆಸುತ್ತಿದ್ದೇವೆ. ಎಲ್ಲ ಧರ್ಮಗಳನ್ನು ಗೌರವಿಸುವುದರ ಜೊತೆ ಆಚರಿಸುವುದು ನಮಗೆ ಅಭ್ಯಾಸವಾಗಿದೆ.

ನಾವು ಭಾರತ ಪ್ರತಿಬಿಂಬಿಸುತ್ತಿರುವ ವೈವಿಧ್ಯತೆಯ ಏಕತೆಯನ್ನು ಪ್ರತಿನಿಧಿಸುತ್ತಿದ್ದೇವೆ. ಗೃಹಿಣಿಯಾಗಿ ಹಾಗೂಎರಡು ಮಕ್ಕಳ ತಾಯಿಯಾಗಿ ಕುಮಾರಿ ಶೋಭಾ ಕರದ್ಲಾಜೆ ಅವರು ತಮ್ಮ ರಾಜಕೀಯ ಲಾಭಗಳಿಗಾಗಿ ನಮ್ಮ ಖಾಸಗಿ ಬದುಕಿನೊಳಗೆ ಪ್ರವೇಶಿಸುವುದನ್ನು ಬಲವಾಗಿ ಖಂಡಿಸುತ್ತೇನೆ.

ಸಂಪೂರ್ಣವಾಗಿಸಂಬಂಧವಿಲ್ಲದವಿಷಯದಲ್ಲಿನಮ್ಮಕುಟುಂಬವನ್ನುವಿಡಂಬನಾತ್ಮಕವಾಗಿಅವರುಉಲ್ಲೇಖಿಸಿದ್ದಾರೆ. ಅವರಿಗೆ ಸಮಾಜದಲ್ಲಿಕೋಮುಅಸಂಗತತೆಸೃಷ್ಟಿಸುವುದುಅವರಏಕೈಕಉದ್ದೇಶವೆಂದುಸೂಚಿಸುತ್ತದೆ.ಕುಮಾರಿ ಶೋಭಾ ಕರಂದ್ಲಾಜೆಯಂಥ ನಾಯಕಿಯ ನಿಲುವು ಇಂತಹ ಮಟ್ಟಕ್ಕೆ ಇಳಿದಿರುವುದು ನಿಜವಾಗಿಯು ದುರಾದೃಷ್ಟಕರ' ಎಂದು ತಿಳಿಸಿದ್ದಾರೆ.

ಶೋಭಾ ಅವರ ಹೇಳಿಕೆಯನ್ನು ದಿನೇಶ್ ಗುಂಡೂರಾವ್ ಅವರು ಕೂಡ ಖಂಡಿಸಿದ್ದಾರೆ.