Asianet Suvarna News Asianet Suvarna News

ಆಲೂಗಡ್ಡೆ, ಈರುಳ್ಳಿಯಿಂದ ತಿರುಗುತ್ತಂತೆ ಟೇಬಲ್ ಫ್ಯಾನ್..!

ಆಲೂಗಡ್ಡೆ ಮತ್ತು ಈರುಳ್ಳಿಯನ್ನು ನೀವು ಏತಕ್ಕಾಗಿ ಬಳಸುತ್ತೀರಿ? ಇಂಥದ್ದೊಂದು ಪ್ರಶ್ನೆ ಕೇಳಿದರೆ ಯಾರೇ ಆದರೂ ಅಡುಗೆ ತಯಾರಿಸಲು ಬಳಸುತ್ತೇವೆ ಎಂದು ಹೇಳುತ್ತಾರೆ. ಆದರೆ, ಆಲೂಗಡ್ಡೆ ಮತ್ತು ಈರುಳ್ಳಿಯಿಂದ ವಿದ್ಯುತ್ ಉತ್ಪಾದನೆಯಾಗುತ್ತದೆ. ಅದರಿಂದ ಟೇಬಲ್ ಫ್ಯಾನ್ ಕೂಡ ತಿರುಗಿಸಬಹುದು ಅಂದರೆ ನಂಬುತ್ತೀರಾ?

Table fan Running using Potato and onions

ಬೆಂಗಳೂರು (ಡಿ.27):ಆಲೂಗಡ್ಡೆ ಮತ್ತು ಈರುಳ್ಳಿಯನ್ನು ನೀವು ಏತಕ್ಕಾಗಿ ಬಳಸುತ್ತೀರಿ? ಇಂಥದ್ದೊಂದು ಪ್ರಶ್ನೆ ಕೇಳಿದರೆ ಯಾರೇ ಆದರೂ ಅಡುಗೆ ತಯಾರಿಸಲು ಬಳಸುತ್ತೇವೆ ಎಂದು ಹೇಳುತ್ತಾರೆ. ಆದರೆ, ಆಲೂಗಡ್ಡೆ ಮತ್ತು ಈರುಳ್ಳಿಯಿಂದ ವಿದ್ಯುತ್ ಉತ್ಪಾದನೆಯಾಗುತ್ತದೆ. ಅದರಿಂದ ಟೇಬಲ್ ಫ್ಯಾನ್ ಕೂಡ ತಿರುಗಿಸಬಹುದು ಅಂದರೆ ನಂಬುತ್ತೀರಾ?

ಹೌದು ವ್ಯಕ್ತಿಯೊಬ್ಬ ಆಲೂಗಡ್ಡೆ ಮತ್ತು ಈರುಳ್ಳಿ ಬಳಸಿ ಟೇಬಲ್ ಫ್ಯಾನ್ ತಿರುಗಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆತ ಬಿ.ಟೆಕ್, ಎಂ.ಟೆಕ್, ಐಐಟಿ ಕಲಿತ ವ್ಯಕ್ತಿಯಲ್ಲ. ಲುಂಗಿ ಧರಿಸಿದ ಸಾದಾ ವ್ಯಕ್ತಿ ಇಂಥದ್ದೊಂದು ಚಮತ್ಕಾರ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. ವೈರಲ್ ಆಗಿರುವ ವಿಡಿಯೋದ ಪ್ರಕಾರ, ಆತ ಟೇಬಲ್ ಫ್ಯಾನಿನ ವೈರ್ ಅನ್ನು ಸ್ವಿಚ್ ಬೋರ್ಡಿಗೆ ಹಾಕುವ ಬದಲು ಎರಡು ಆಲೂಗಡ್ಡೆ ಮತ್ತು ಒಂದು ಈರುಳ್ಳಿಯನ್ನು ಎರಡು ಸರಳಿಗೆ ಸುರಿದು ಅದನ್ನು ನೆಲದಲ್ಲಿ ಹುಗಿಯುತ್ತಾನೆ.ಬಳಿಕ ಅದಕ್ಕೆ ಫ್ಯಾನಿನ ವೈರ್ ಸಂಪರ್ಕಿಸುತ್ತಾನೆ. ತಕ್ಷಣವೇ ಫ್ಯಾನ್

ವೇಗವಾಗಿ ತಿರುಗಲು ಆರಂಭವಾಗುತ್ತದೆ. ಇದನ್ನು ನೋಡಿ ಜನರೆಲ್ಲಾ ಅಚ್ಚರಿಗೆ ಒಳಗಾಗಿದ್ದಾರೆ. ನಿಜವಾಗಿಯೂ ಹೀಗೆ ಆಲೂಗಡ್ಡೆ ಮತ್ತು ಈರುಳ್ಳಿಯಿಂದ ವಿದ್ಯುತ್ ಉತ್ಪಾದನೆ ಮಾಡಬಹುದೇ?

ವಿದ್ಯುತ್ ಉತ್ಪಾದನೆ ಮಾಡುವುದು ಇಷ್ಟೊಂದು ಸುಲಭವೇ ಎಂಬ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಈ ಕುರಿತು ಎಲೆಕ್ಟ್ರಾನಿಕ್ ತಜ್ಞರನ್ನು ಕೇಳಿದಾಗ ಇಂಥದ್ದೊಂದು ಸಾಧ್ಯತೆಯನ್ನು ಅವರು ನಿರಾಕರಿಸಿದ್ದಾರೆ. ಆಲೂಡ್ಡೆ ಮತ್ತು ಈರುಳ್ಳಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿನ ಅಂಶ ಮತ್ತು ರಾಸಾಯನಿಕಗಳು ಇರುತ್ತವೆ. ಅವು ವಿದ್ಯುತ್ ಪ್ರವಹಿಸಲು ನೆರವು ನೀಡುತ್ತವೆ. ಆದರೆ, ಅವುಗಳಿಂದಲೇ ವಿದ್ಯುತ್ ಉತ್ಪಾದನೆ ಆಗುವುದಿಲ್ಲ. ಆ ಫ್ಯಾನಿಗೆ ಯಾವುದೋ ಬ್ಯಾಟರಿ ಅಳವಡಿಸಿರಬಹುದು, ಇಲ್ಲವೇ ಇನ್ನಾವುದೋ ತಂತ್ರಜ್ಞಾನ ಬಳಸಿರಬಹುದು ಎಂದು ಹೇಳಿದ್ದಾರೆ.

 

Latest Videos
Follow Us:
Download App:
  • android
  • ios